
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ ಇಂದು ಒಟ್ಟೂ 122 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 2405 ಕ್ಕೇರಿದೆ. ಇದರಲ್ಲಿ 1596 ಪ್ರಕರಣಗಳು ಸಕ್ರೀಯವಾಗಿವೆ. 762 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇಂದು ಬೆಳಗಾವಿಯಲ್ಲಿ 4 ಜನರಿಗೆ ಸೋಂಕು ಪತ್ತೆಯಾಗಿದೆ. ಇವರಲ್ಲಿ ಇಬ್ಬರು ಮಹಾರಾಷ್ಟ್ರದಿಂದ, ತಲಾ ಒಬ್ಬರು ದೆಹಲಿ ಮತ್ತು ಕೇರಳದಿಂದ ಬಂದವರು. ಉತ್ತರ ಕನ್ನಡದಲ್ಲಿ 6 ಜನರಿಗೆ ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಹಿಂತಿರುಗಿದವರು.
ದಕ್ಷಿಣ ಕನ್ನಡದಲ್ಲಿ 11, ಉಡುಪಿಯಲ್ಲಿ 9, ರಾಯಚೂರಿನಲ್ಲಿ 5, ಯಾದಗಿರಿಯಲ್ಲಿ 16, ಬಳ್ಳಾರಿ 1, ಬೀದರ್ 12, ಬೆಂಗಳೂರು ಗ್ರಾಮೀಣ 2, ಬೆಂಗಳೂರು ನಗರ 6, ವಿಜಯಪುರ 1, ಕಲಬುರಗಿ 28, ಮಂಡ್ಯ 1, ವಿಜಯಪುರ 1, ತುಮಕೂರು 1, ಹಾಸನ 14, ಚಿಕ್ಕಮಗಳೂರು 3 ಪ್ರಕರಣಗಳು ಪತ್ತೆಯಾಗಿವೆ.