ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 12 ಪತ್ರಕರ್ತರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಭಾನುವಾರ ನಡೆಯಲಿರುವ ಲೋಕಸಭಾ ಉಪಚುನಾವಣೆಯ ಮತ ಎಣಿಕೆ ಕೇಂದ್ರಕ್ಕೆ ತೆರಳಲು ಕೊರೋನಾ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ ಎಂದು ನಿಯಮ ಮಾಡಿರುವ ಹಿನ್ನೆಲೆಯಲ್ಲಿ ಪತ್ರಕರ್ತರ ಕೊರೋನಾ ಟೆಸ್ಟ್ ಮಾಡಲಾಯಿತು. ಒಟ್ಟೂ 70 ಪತ್ರಕರ್ತರು ಟೆಸ್ಟ್ ಗೆ ಒಳಗಾಗಿದ್ದರು. ಅವರಲ್ಲಿ 12 ಜನರಿಗೆ ಪಾಸಿಟಿವ್ ಬಂದಿದೆ. ಅವರ ಪೈಕಿ 11 ಜನರಿಗೆ ಕೊರೋನಾದ ಯಾವುದೇ ಲಕ್ಷಣಗಳಿಲ್ಲ.
ಈ ಎಲ್ಲ ಪತ್ರಕರ್ತರು ಹೋಮ್ ಐಸೋಲೇಶನ್ ಮಾಡಿಕೊಂಡರೆ ಸಾಕು, ಆಸ್ಪತ್ರೆಗೆ ದಾಖಲಾಗಬೇಕಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲ್ಲ ಪತ್ರಕರ್ತರಿಗೆ ಅಗತ್ಯ ಎಲ್ಲ ನೆರವು ಒದಗಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.
ಒಂದು ವೇಳೆ ಮತ ಎಣಿಕೆ ಇಲ್ಲದಿದ್ದಲ್ಲಿ ಈ ಪತ್ರಕರ್ತರಿಗೆ ಕೊರೋನಾ ಇರುವುದೇ ಪತ್ತೆಯಾಗುತ್ತಿರಲಿಲ್ಲ. ಅದು ಕುಟುಂಬದವರಿಗೆ ಹಾಗೂ ಅವರ ಸಂಪರ್ಕಕ್ಕೆ ಬರುವ ಇನ್ನಷ್ಟು ಜನರಿಗೆ ಹರಡುವ ಅಪಾಯವಿತ್ತು.
ಬೆಡ್ ಲಭ್ಯತೆಯೂ ಸೇರಿ ಬೆಳಗಾವಿ ಜಿಲ್ಲೆಯ ಸಮಗ್ರ ಕೊರೋನಾ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ