ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾದ ಲಕ್ಷಣಗಳು ಕಾಣಿಸಿದ್ದರಿಂದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹೋಂ ಕ್ವಾರಂಟೈನ್ ನಲ್ಲಿದ್ದಾರೆ.
ಕಳೆದ ಶನಿವಾರ ಅವರಿಗೆ ಸ್ವಲ್ಪಮಟ್ಟಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಗಂಟಲು ದ್ರವ ತಪಾಸಣೆಗೆ ಕಳುಹಿಸಿದರು. ಅಂದಿನಿಂದಲೇ ಅವರು ಮನೆಯ ಒಂದು ಕೊಠಡಿಯಲ್ಲೇ ವಾಸ್ತವ್ಯ ಮಾಡಿದರು. ಸೋಮವಾರ ಅವರ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದ್ದು, ಕೊರೋನಾ ಲಕ್ಷಣಗಳು ಕಾಣಿಸಿವೆ. ಹಾಗಾಗಿ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಒಂದು ವಾರ ಕ್ವಾರಂಟೈನ್ ನಲ್ಲಿರುವುದಾಗಿ ಬೆನಕೆ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಇಂದು ಅವರ ಮನೆಯ ಇತರ ಸದಸ್ಯರ ಗಂಟಲು ದ್ರವಗಳನ್ನು ಸಹ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.
ನನಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ನಾನು ಶನಿವಾರದಿಂದಲೇ ಹೋಂ ಕ್ವಾರಂಟೈನ್ ಗೆ ಒಳಗಾದೆ. ಇದೀಗ ಪರೀಕ್ಷಾ ವರದಿ ಬಂದಿದ್ದು, ಸ್ವಲ್ಪಮಟ್ಟಿಗೆ ಲಕ್ಷಣ ಕಾಣಿಸಿದೆ. ಹಾಗಾಗಿ ಇನ್ನೂ ಕೆಲವು ದಿನ ಕ್ವಾರಂಟೈನ್ ಮುಂದುವರಿಸುತ್ತೇನೆ.
-ಅನಿಲ ಬೆನಕೆ, ಶಾಸಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ