
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸೋಂಕು ತಡೆಗಾಗಿ ದೇಶದ ಜನತೆ ಕಾಯುತ್ತಿದ್ದ ಆ ಕ್ಷಣ ಇದೀಗ ಬಂದಿದೆ. ಎರಡು ಸ್ವದೇಶಿ ವ್ಯಾಕ್ಸಿನ್ ನಮ್ಮ ಕೈಸೇರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊರೊನಾ ಮಹಾಮಾರಿ ತಡೆಗೆ ದೇಶಾದ್ಯಂತ ಅತಿದೊಡ್ಡ ಲಸಿಕಾ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು, ಈ ವೇಳೆ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಹೆಮ್ಮಾರಿಗೆ ಬಹಳ ಕಡಿಮೆ ಸಮಯದಲ್ಲಿ ಲಸಿಕೆ ಬಂದಿದೆ. ದೇಶದ ವಿಜ್ನಾನಿಗಳು, ಸಂಶೋಧಕರ ಶ್ರಮದಿಂದ ಲಸಿಕೆ ಬಂದಿದೆ. ಇಷ್ಟು ದಿನ ಒಂದು ಲಸಿಕೆ ಅಭಿವೃದ್ಧಿಗೆ ಹಲವು ವರ್ಷಗಳು ಬೇಕಿತ್ತು. ಆದರೆ ಈಗ ಕೆಲವೇ ದಿನಗಳಲ್ಲಿ ಲಸಿಕೆ ಅಭಿವೃದ್ಧಿಗೊಂಡಿದೆ. ಮನುಷ್ಯ ಪರಿಶ್ರಮ ಹಾಕಿದರೆ ಕಲ್ಲು ಕೂಡ ನೀರಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ಸ್ವದೇಶಿ ನಿರ್ಮಿತ ವ್ಯಾಕ್ಸಿನ್ ಭಾರತದ ಸಾಧನೆಯ ಪ್ರತೀಕ. ಎಲ್ಲರೂ ಲಸಿಕೆಯ ಎರಡು ಡೋಸ್ ಪಡೆದುಯುವ ಅವಶ್ಯಕತೆಯಿದೆ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಗೆ ಲಸಿಕೆ ನೀಡಲಾಗುವುದು. ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಎಲ್ಲರಿಗೂ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡಲಿದೆ. ಎರಡು ಡೋಸ್ ಲಸಿಕೆ ಪಡೆಯುವ ಅಗತ್ಯವಿದೆ. ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಲಸಿಕೆ ಹಾಕಲಾಗುವುದು. 2ನೇ ಹಂತದಲ್ಲಿ 30 ಲಕ್ಷ ಜನರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಭಾರತದ ಸ್ಥಿತಿಗತಿಗೆ ತಕ್ಕಂತೆ ಲಸಿಕೆ ಅಭಿವೃದ್ಧಿ. ಕೊರೊನಾ ವಿರುದ್ಧ ನಮ್ಮ ಹೋರಾಟ ಆತ್ಮವಿಶ್ವಾಸದಿಂದ ಆತ್ಮನಿರ್ಭರದಿಂದ ಮುಂದುವರೆಯುತ್ತೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ