ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಈ ನಡುವೆ ಉಚಿತವಾಗಿ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ವಿಪಕ್ಷಗಳು ಒತ್ತಾಯಿಸಿವೆ.
ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ನಿಟ್ಟಿನಲ್ಲಿ ಆಗ್ರಹಿಸಿದ್ದು, ಚರ್ಚೆ ಸಾಕಷ್ಟಾಯಿತು. ದೇಶದ ಜನರಿಗೆ ಮೊದಲು ಉಚಿತವಾಗಿ ಲಸಿಕೆ ಸಿಗಬೇಕು ಅಷ್ಟೇ. ಬಾತ್ ಖತಂ. ಭಾರತವನ್ನು ಬಿಜೆಪಿ ವ್ಯವಸ್ಥೆಗೆ ಬಲಿಯನ್ನಾಗಿಸಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಗೆ ಸಂಸ್ಥೆ ದರ ನಿಗದಿ ಮಾಡಿದ್ದು, ರಾಜ್ಯ ಸರ್ಕಾರಗಳಿಗೆ ಒಂದು ಡೋಸ್ ಗೆ 600 ರೂಪಾಯಿ, ಖಾಸಗಿ ಆಸ್ಪತ್ರೆಗೆ 1200 ರೂಪಾಯಿ ದರದಲ್ಲಿ ಪೂರೈಕೆ ಮಾಡುವುದುದಾಗಿ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ