Latest

ಕೊರೊನಾ ಲಸಿಕೆ ಹಾಕಿಸಿಕೊಂಡು ಧೈರ್ಯ ತುಂಬಿದ ಡಾ.ಎಂ.ಕೆ ಸುದರ್ಶನ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶಾದ್ಯಂತ ಮಹಾಮಾರಿ ಕೊರೊನಾಗೆ ಲಸಿಕೆ ಅಭಿಯಾನ ಆರಂಭವಾಗಿದ್ದು, ರಾಜ್ಯದಲ್ಲಿಯೂ ಕೂಡ ಲಸಿಕೆ ನೀಡಲಾಗುತ್ತಿದೆ. ಈ ನಡುವೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಸ್ವತ: ಲಸಿಕೆ ಹಾಕಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.

ಈ ಕುರಿತು ಮಾತನಾಡಿರುವ ಡಾ.ಎಂ.ಕೆ ಸುದರ್ಶನ್, ನಾನು ಲಸಿಕೆ ಹಾಕಿಸಿಕೊಂಡಿದ್ದೇನೆ. ಲಸಿಕೆ ಬಗ್ಗೆ ಇರುವ ಅನುಮಾನ ದೂರವಾಗಲಿ ಎಂಬ ಕಾರಣಕ್ಕೆ ನಾನು ಲಸಿಕೆ ಹಾಕಿಸಿಕೊಂಡಿದ್ದು, ನನಗೆ ಯಾವುದೇ ಸಮಸ್ಯೆಯಿಲ್ಲ ಎಂದಿದ್ದಾರೆ.

Home add -Advt

ಧೈರ್ಯವಾಗಿ ಎಲ್ಲರೂ ಲಸಿಕೆ ಪಡೆಯಬಹುದಾಗಿದೆ. ಕೊರೊನಾ ಲಸಿಎಂ ಎಂಬುದು ಸಂಜೀವಿನಿಯಿದ್ದಂತೆ. ಅದಕ್ಕಾಗಿಯೇ ನಾನು ಲಸಿಕೆ ಪಡೆದುಕೊಂಡಿದ್ದು, ಕೋವಿಡ್ ಲಸಿಕೆ ಪಡೆದರೂ ನಿಯಮ ಪಾಲನೆ ಕಡ್ಡಾಯ ಎಂದಿದ್ದಾರೆ.

Related Articles

Back to top button