Latest

ರಾಜ್ಯದಲ್ಲಿ ಇಂದು 101 ಕೊರೊನಾ ಕೇಸ್ ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಇಂದು 101 ಜನರಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2289ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಸಂಜೆ ಹೆಲ್ತ್ ಬುಲೆಟಿನ್ ಪ್ರಕಾರ ಚಿತ್ರದುರ್ಗ 20, ಯಾದಗಿರಿ 14, ಬೆಳಗಾವಿ 13, ಹಾಸನ 13, ದಾವಣಗೆರೆ 11, ಬೀದರ್ 10, ವಿಜಯಪುರ 6, ಉಡುಪಿ 3, ಕೋಲಾರ 2, ಬೆಂಗಳೂರು ನಗರ 2, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೊಪ್ಪಳ, ಬಳ್ಳಾರಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.

Home add -Advt

ರಾಜ್ಯದಲ್ಲಿ ಪತ್ತೆಯಾದ 2289ಕೊರೊನಾ ಸೋಂಕಿತರ ಪೈಕಿ 748 ಜನ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 1489 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಸೋಂಕಿಗೆ 44 ಜನ ಬಲಿಯಾಗಿದ್ದಾರೆ.

ಈವರೆಗೆ ರಾಜ್ಯದಲ್ಲಿ ಮಹಾರಾಷ್ಟ್ರ, ಗುಜರಾತಿನಿಂದ ಆಗಮಿಸಿದ ಜನರಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೀಗ ತಮಿಳುನಾಡು ಮತ್ತು ಜಾರ್ಖಂಡ್ ರಾಜ್ಯದಿಂದ ಮರಳಿದ ವ್ಯಕ್ತಿಗಳಿಗೂ ಸೋಂಕು ಪತ್ತೆಯಾಗಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ.

Related Articles

Back to top button