Latest

ರಾಜ್ಯದಲ್ಲಿ ಇಂದು 115 ಜನರಲ್ಲಿ ಕೊರೊನಾ ಸೋಂಕು ದೃಢ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಇಂದು 115 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 2533 ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಹೆಲ್ತ್ ಬುಲೆಟಿನ್ ಪ್ರಕಾರ ಉಡುಪಿ 29, ದಕ್ಷಿಣ ಕನ್ನಡ 24, ಬೀದರ್‌ 12, ಬೆಂಗಳೂರು ನಗರ 9, ಕಲಬುರಗಿಯಲ್ಲಿ 5, ಯಾದಗಿರಿಯಲ್ಲಿ 7, ಹಾಸನದಲ್ಲಿ 13, ಚಿತ್ರದುರ್ಗದಲ್ಲಿ 6, ಹಾವೇರಿಯಲ್ಲಿ 4, ಚಿಕ್ಕಮಗಳೂರಲ್ಲಿ 3, ರಾಯಚೂರಲ್ಲಿ 1, ವಿಜಯಪುರದಲ್ಲಿ 2 ಪ್ರಕರಣಗಳು ದೃಢಪಟ್ಟಿವೆ.

Home add -Advt

ಇದುವೆರೆಗೆ ರಾಜ್ಯದಲ್ಲಿ ಕೊರೊನಾ ವೈರಸ್‌ಗೆ ಒಟ್ಟು 47 ಮಂದಿ ಬಲಿಯಾಗಿದ್ದಾರೆ. 834 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. 1650 ಮಂದಿಯಲ್ಲಿ ಕೊರೊನಾ ವೈರಸ್‌ ಸಕ್ರಿಯವಾಗಿದೆ. ಗುರುವಾರ ಒಂದೇ ದಿನ 53 ಮಂದಿ ಸೋಂಕಿತರು ಗುಣವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಪ್ರಸ್ತುತ 13 ಮಂದಿ ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related Articles

Back to top button