Latest

ರಾಜ್ಯದಲ್ಲಿ ಇಂದು 143 ಜನರಲ್ಲಿ ಕೊರೊನಾ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಇಂದು 143 ಜನರಲ್ಲಿ ಕೊರೊನ ಸೊಂಕು ಪತ್ತೆಯಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1605ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ಮಂಡ್ಯ 33, ಉಡುಪಿ 23, ಹಾಸನ 13, ಬಳ್ಳಾರಿ 11, ಬೆಳಗಾವಿ 9, ಬೆಂಗಳೂರು 7, ಶಿವಮೊಗ್ಗ 6, ಧಾರವಾಡ 5, ರಾಯಚೂರು 5, ದಾವಣಗೆರೆ 3, ದಕ್ಷಿಣ ಕನ್ನಡ 5, ಉತ್ತರ ಕನ್ನಡ 9, ಕೋಲಾರ 2, ಗದಗ 2, ಕೋಲಾರ 2, ಮೈಸೂರು 1, ತುಮಕೂರು 1, ವಿಜಯಪುರ 1 ಕೇಸ್ ಪತ್ತೆಯಾಗಿದೆ.

Home add -Advt

ರಾಜ್ಯದಲ್ಲಿ ಈ ವರೆಗೆ ಕೊರೊನಾ ಸೋಂಕಿಗೆ 41 ಜನರು ಬಲಿಯಾಗಿದ್ದಾರೆ. 992 ಜನರಲ್ಲಿ ಸೋಂಕು ಸಕ್ರಿಯವಾಗಿದೆ. 571 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

Related Articles

Back to top button