Latest

ಭಕ್ತಿಯ ರಂಗೇರುತ್ತಿದೆ ಶಿರಸಿ ಜಾತ್ರೆ: ದರ್ಶನ ಪಡೆದ ಸಚಿವ ಹೆಬ್ಬಾರ್

ಪ್ರಗತಿವಾಹಿನಿ ಸುದ್ದಿ, ಶಿರಸಿ – ದಕ್ಷಿಣ ಭಾರತದ ಪ್ರಸಿದ್ಧ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದ ಜಾತ್ರೆ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಮೊದಲ 3 ದಿನ ಕಡಿಮೆಯಿದ್ದ ಜನಪ್ರವಾಹ 4ನೇ ದಿನವಾದ ಶುಕ್ರವಾರದಿಂದ ಹೆಚ್ಚಾಗುತ್ತಿದೆ. ಶನಿವಾರ ಮತ್ತು ಭಾನುವಾರ ಜನಜಂಗುಳಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಭಕ್ತರು ಶಿರಸಿಯತ್ತ ಆಗಮಿಸುತ್ತಿದ್ದಾರೆ.

ಡಿಎಸ್ಪಿ ಗೋಪಾಲಕೃಷ್ಣ ನಾಯಕ ನೇತೃತ್ವದಲ್ಲಿ ಪೊಲೀಸರು ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಲ್ಲದೆ, ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸಿದ್ದಾರೆ.

ಯಕ್ಷಗಾನ, ನಾಟಕ ಮೊದಲಾದ ಮನರಂಜನೆಗಳೂ ಜನರನ್ನು ಸೆಳೆಯುತ್ತಿವೆ.

Home add -Advt

ಶಿವರಾಮ್ ಹೆಬ್ಬಾರ್ ಭೇಟಿ

ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಶುಕ್ರವಾರ ಸಂಜೆ ಪತ್ನಿ ಸಮೇತ ಭೇಟಿ ನೀಡಿ, ಮಾರಿಕಾಂಬೆಯ ಆಶೀರ್ವಾದವನ್ನು ಪಡೆದುಕೊಂಡರು.

 

 

ಜಾತ್ರಾ ಗದ್ದುಗೆಯಲ್ಲಿ‌ ವಿರಾಜಮಾನಳಾಗಿರುವ ತಾಯಿ ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಹೆಬ್ಬಾರ್ ದಂಪತಿ, ಲೋಕಕಲ್ಯಾಣವಾಗಲಿ ಎಂದು ಬೇಡಿಕೊಂಡರು.  ಪ್ರತಿ ಜಾತ್ರೆಯಲ್ಲೂ   ಹೆಬ್ಬಾರ್ ಗದ್ದುಗೆಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಳ್ಳುವರು.

Related Articles

Back to top button