Latest

ಉಜ್ವಲ ಯೋಜನೆಯ ಗ್ಯಾಸ್  ಸಂಪರ್ಕ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಗ್ರಾಮೀಣ ಮತಕ್ಷೇತ್ರದ ಮೋದಗಾ ಗ್ರಾಮದಲ್ಲಿ ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆಯಡಿ ಗ್ರಾಮದ 106 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಒಲೆ, ಸಿಲಿಂಡರ್ ಹಾಗೂ ಕಟ್ಟಡ ಕಾರ್ಮಿಕರಿಗೆ ಕಾರ್ಡುಗಳನ್ನು ಸಂಸದ ಸುರೇಶ ಅಂಗಡಿ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ ವಿತರಿಸಿದರು.

Home add -Advt

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜಯ ಪಾಟೀಲ, ಬಿಪಿಎಲ್ ಕಾರ್ಡ ಹೊಂದಿದ ಗ್ಯಾಸ್ ಸಂಪರ್ಕವಿಲ್ಲದ ಕುಟುಂಬಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೇಶಾದ್ಯಂತ 8 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು, ಅದರಲ್ಲಿ ಈಗಾಗಲೇ 6.5 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಯೋಜನೆಯ ಲಾಭ ಪಡೆಯದವರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.

ಭಾರತೀಯ ವಾಯುಸೇನೆಯು ಉಗ್ರರ ಅಡುಗುದಾಣಗಳನ್ನು ದ್ವಂಸಗೊಳಿಸಿ ಸುಮಾರು 300 ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿದದ್ದಕ್ಕಾಗಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ಮಹೇಶ ಮೋಹಿತೆ, ಯಲ್ಲಪ್ಪಾ ಅಷ್ಟೇಕರ, ಸಂಜು ಅಷ್ಟೇಕರ, ರಾಹುಲ ಪಾಟೀಲ, ಅಭಯ ಅವಲಕ್ಕಿ, ಓಮಣ್ಣಾ ಅಷ್ಟೇಕರ, ಖೇಸರಖಾನ ಮುಲ್ಲಾ, ಬಾಬು ಕಾಳೆ, ಶಿವಾ ಅಷ್ಟೇಕರ, ರಾಮನಗೌಡ ಪಾಟೀಲ, ಸಂಜಯ ಅಷ್ಟೇಕರ, ವೀರಭದ್ರ ನೇಸರಗಿ, ಸಾಗರ ಶೇರೆಕರ ಹಾಗೂ ಫಲಾನುಭವಿಗಳು, ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು ಇದ್ದರು.

Related Articles

Back to top button