Latest

*ಮತ್ತೊಂದು ಭಯಾನಕ ಘಟನೆ ಬೆಳಕಿಗೆ; ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಸೀಲ್ ಮಾಡಿದ ರೀತಿಯಲ್ಲಿ ಯುವತಿಯ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಅಪರಿತ ಮಹಿಳೆಯ ಶವ ರೈಲಿನಲ್ಲಿ ಚೀಲದಲ್ಲಿ ಸುತ್ತಿಟ್ಟ ರೀತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರನದ ತನಿಖೆ ನಡೆಯುತ್ತಿರುವಾಗಲೇ ಅಂಥದ್ದೇ ಮತ್ತೊಂದು ಘಟನೆ ರಾಜಧಾನಿ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಬೆಳಜಿಗೆ ಬಂದಿದೆ.

ಅಪರಿಚಿತ ಯುವತಿಯ ಶವವೊಂದು ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಬಾಕ್ಸ್ ನಲ್ಲಿ ಪತ್ತೆಯಾಗಿದೆ. ಯಶವಂತಪುರ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ 1ರ ಗೂಡ್ಸ್ ಪ್ಲಾಟ್ ಫಾರ್ಮ್ ನಲ್ಲಿ ಪ್ಲಾಸ್ಟಿಕ್ ಕವರ್ ಸುತ್ತಿ ಸೀಲ್ ಮಾಡಿರುವ ರೀತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.

ಕಳೆದ ನಾಲ್ಕು ದಿನಗಳಿಂದ ಗೂಡ್ಸ್ ಪ್ಲಾಟ್ ಫಾರ್ಮ್ ನಲ್ಲಿ ಬಾಕ್ಸ್ ವೊಂದು ಇತ್ತು. ಆದರೂ ಯಾರೂ ಅಷ್ಟಾಗಿ ಅದನ್ನು ಪರಿಶೀಲನೆ ನಡೆಸಿಲ್ಲ ಎನ್ನಲಾಗಿದೆ, ಇಂದು ಬಾಕ್ಸ್ ನಿಂದ ವಾಸನೆ ಬರುತ್ತಿದ್ದ ಕಾರಣ ಪೊಲೀಸರು ಅನುಮಾನಗೊಂಡು ಬಾಕ್ಸ್ ಪರಿಶೀಲಿಸಿದ್ದಾರೆ. ಬಾಕ್ಸ್ ನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಬಟ್ಟೆಗಳನ್ನು ಇಟ್ಟು ಸುತ್ತಿಟ್ಟ ರೀತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. 23 ವರ್ಷದ ಯುವತಿಯ ಶವವಾಗಿದ್ದು, ಮೃತದೇಹ ಕೊಳತ ಸ್ಥಿತಿಯಲ್ಲಿದೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ್ದು, ಪೊಲೀಸರು ಯುವತಿಯ ಗುರುತು ಪತ್ತೆಗಾಗಾಗಿ ತನಿಖೆ ನಡೆಸಿದ್ದಾರೆ.

ಡಿಸೆಂಬರ್ 6ರಂದು ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಸೀಟ್ ಕೆಳಗಡೆ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಚೀಲದಲ್ಲಿ ಬಟ್ಟೆಗಳ ನಡುವೆ ಅಪರಿಚಿತ ಮಹಿಳೆಯ ಮೃತದೇಹವಿರಿಸಿದ್ದ ರೀತಿಯಲ್ಲಿ ಶವ ಪತ್ತೆಯಾಗಿತ್ತು. ಮಹಿಳೆಯ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ನಡೆಸಿದ್ದಾಗಲೇ ಈಗ ಯಶವಂತಪುರ ರೈಲು ನಿಲ್ದಾಣದಲ್ಲಿ ಅಪರಿಚಿತ ಯುವತಿಯ ಶವ ಸೀಲ್ ಮಾಡಿದ ರೀತಿಯಲ್ಲಿ ಪತ್ತೆಯಾಗಿರುವುದು ಬೆಂಗಳೂರಿಗರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

Home add -Advt

*ಪಡಿತರ ಅಕ್ಕಿ ಪಡೆಯುವವರಿಗೆ ಬಿಗ್ ಶಾಕ್*

https://pragati.taskdun.com/bpl-card-holders4-kg-ricereductionannounce/

Related Articles

Back to top button