Kannada NewsLatest

ರಾಜ್ಯದಲ್ಲಿ ಇಂದು 69 ಜನರಲ್ಲಿ ಕೊರೊನಾ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಇಂದು 69 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇಂದು 69 ಜನರಲ್ಲಿ ಹೊಸದಾಗಿ ಕೊರೊನ ಅಸೋಂಕು ದೃಢಪಟ್ಟಿದೆ. ಉಡುಪಿ 16, ಯಾದಗಿರಿ 15, ಕಲಬುರಗಿ 14, ಬೆಂಗಳೂರು ನಗರ 6, ಬಳ್ಳಾರಿ 3, ಧಾರವಾಡ 3, ದಕ್ಷಿಣ ಕನ್ನಡ 3, ಬಳ್ಳಾರಿ 3, ಕೋಲಾರ, ಮಂಡ್ಯ ತಲಾ 2, ತುಮಕೂರು, ಬೀದರ್ , ರಾಮನಗರದಲ್ಲಿ 1 ಕೇಸ್ ಪತ್ತೆಯಾಗಿದೆ.

ಈವರೆಗೆ ಗ್ರೀನ್ ಝೋನ್ ಆಗಿದ್ದ ರಾಮನಗರ ಜಿಲ್ಲೆಯಲ್ಲಿ ಇಂದು ಮೊದಲ ಬಾರಿಗೆ ಓರ್ವರಲ್ಲಿ ಕೊರೊನಾ ಪಾಸಿಟೀವ್ ಕಂಡುಬಂದಿದ್ದು ರೇಷ್ಮೆ ನಾಡಿನಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಂದು ಕೊರೊನಾ ಪತ್ತೆಯಾದ ಬಹುತೇಕ ಜನರು ಹೊರ ರಾಜ್ಯದಿಂದ ಬಂದವರಾಗಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button