ಕೊರೊನಾ ಸೋಂಕಿಗೆ ಅಮೆರಿಕಾದಲ್ಲಿ 20 ಸಾವಿರ ಜನ ಬಲಿ

ಪ್ರಗತಿವಾಹಿನಿ ಸುದ್ದಿ; ವಾಷಿಂಗ್ಟನ್: ವಿಶ್ವಾದ್ಯಂತ ಹೆಚ್ಚುತ್ತಿರುವ ಕೊರೊನಾ ಸೋಂಕಿಗೆ ಈವರೆಗೆ 1.8 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನ ಪ್ರಕರಣದಲ್ಲಿ ಅಮೆರಿಕಾ ಚೀನಾವನ್ನೂ ಹಿಂದಿಕ್ಕಿದ್ದು, 20 ಸಾವಿರ ಜನರು ಮೃತಪಟ್ಟಿದ್ದಾರೆ.

ಅಮೆರಿಕಾದಲ್ಲಿ 24 ಗಂಟೆಯಲ್ಲಿ 911 ಜನರು ಮೃತಪಟ್ಟಿದ್ದಾರೆ. ಶನಿವಾರ 26 ಸಾವಿರ ಹೊಸ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 5.3 ಲಕ್ಷ ದಾಟಿದೆ. ಬರೋಬ್ಬರಿ 20,577 ಜನರು ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ಮೊಟ್ಟ ಮೊದಲ ಬಾರಿಗೆ ಕೊರೋನಾ ವೈರಸ್​ ಕಾಣಿಸಿಕೊಂಡಾಗ ಯಾವುದೇ ಮುಂಜಾಗೃತ ಕ್ರಮ ಕೈಗೊಂಡಿರಲಿಲ್ಲ. ಇದು ಕೊರೋನಾ ವೈರಸ್​ ಹರಡಲು ಪ್ರಮುಖ ಕಾರಣ ಎನ್ನಲಾಗಿದೆ.

ಜನ ನಿಬಿಡ ನಗರಗಳಾದ ನ್ಯೂಯಾರ್ಕ್​ ಸೇರಿ ಹಲವು ಕಡೆಗಳಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಹೀಗಾಗಿ ಈ ವೈರಸ್​ ಕಬಂದ ಬಾಹು ಚಾಚುತ್ತಿದೆ.

ಸ್ಪೇನ್​ ಕೂಡ ಈ ಭೀಕರ ವೈರಸ್​ ದಾಳಿಗೆ ತತ್ತರಿಸಿದೆ. 1.63 ಲಕ್ಷ ಜನರಲ್ಲಿ ಕೊರೋನಾ ಸೋಂಕು ಇದೆ. 16 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 15 ಲಕ್ಷ ಜನರಿಗೆ ಸೋಂಕು ಅಂಟಿದ್ದು, 19 ಸಾವಿರ ಮಂದಿ ಅಸುನೀಗಿದ್ದಾರೆ.

Home add -Advt

ಮೊಟ್ಟ ಮೊದಲು ಕೊರೋನಾ ವೈರಸ್ ಕಾಣಿಸಿಕೊಂಡಿದ್ದ ಚೀನಾದಲ್ಲಿ ಕೊರೋನಾ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಕೊರೋನಾ ಮುಕ್ತ ರಾಷ್ಟ್ರ ಆಗುವ ಭರವಸೆಯನ್ನು ಚೀನಾ ವ್ಯಕ್ತಪಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button