ಮದರಸಾ ಮೇಲೆ ದಾಳಿ ಮಾಡಿ ಲಾಠಿ ಬೀಸಿದ ಪೊಲೀಸರು

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಕೊರೊನಾ ಭೀತಿ ಹಿನ್ನಲೆಯಲ್ಲಿ ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದೇಶ ನೀಡಿದ್ದರೂ ನಿಯಮ ಉಲ್ಲಂಘಿಸಿ ಸಾಮೂಹಿಕವಾಗಿ ಮದರಸಾದಲ್ಲಿ ಉಳಿದುಕೊಂಡಿದ್ದ ಮುಸ್ಲಿಂ ಸಮುದಾಯದವರ ಮೇಲೆ ಪೊಲೀಸರು ಲಾಠಿ ಬೀಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಕೊರೊನಾ ಸೋಂಕು ಹರಡದಂತೆ 21 ದಿನಗಳ ಕಾಲ ಇಡೀ ದೇಶವನ್ನು ಲಾಕ್‌ಡೌನ್ ಮಾಡಲಾಗಿದೆ. ಆದರೆ, ಇದನ್ನು ಲೆಕ್ಕಿಸದ ಬಾಗಲಕೋಟೆ ಮುಧೋಳ ಮದರಸಾ ಧರ್ಮ ಪ್ರಚಾರಾರ್ಥವಾಗಿ 22 ಜನ ಮುಸ್ಲಿಮರನ್ನು ಒಂದು ತಿಂಗಳ ಹಿಂದೆಯೇ ಮದರಸಾಗೆ ಕರೆಸಿದೆ. ದೆಹಲಿ ಮೂಲದ ಇವರು ತಮ್ಮ ಊರಿಗೂ ಹಿಂದಿರುಗದೆ ಇಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಎಲ್ಲರೂ ಒಟ್ಟಾಗಿ ಉಳಿದುಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆ ಮದರಸಾ ಮೇಲೆ ದಾಳಿ ನಡೆಸಿರುವ ಪಿಎಸ್‌ಐ ಎಲ್ಲರಿಗೂ ಲಾಠಿ ಏಟು ನೀಡಿದ್ದಾರೆ.

ಅಲ್ಲದೆ, ಆರೋಗ್ಯ ಇಲಾಖೆ ಅಧಿಕಾರಿಗಳು ಮದರಸಾದಲ್ಲೆ ಎಲ್ಲರ ಆರೋಗ್ಯ ತಪಾಸಣೆ ಮಾಡಿ ಪ್ರತ್ಯೇಕ ರೂಂ ಗಳಲ್ಲಿ ಐಶೋಲೆಷನ್ ಗೆ ಒಳಪಡಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button