ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಪ್ರತಿ ದಿನ 25 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ದೇಶದಲ್ಲಿ 32 ಜಿಲ್ಲೆಗಳು ಡೆಡ್ಲಿ ಕೊರೊನಾ ಜಿಲ್ಲೆಗಳೆಂದು ಗುರುತಿಸಲಾಗಿದ್ದು, ಇದರಲ್ಲಿ ರಾಜ್ಯದ ಎರಡು ಜಿಲ್ಲೆಗಳ ಹೆಸರು ಕೂಡ ಇರುವುದು ಆತಂಕಕಾರಿಯಾಗಿದೆ.
ಈ ಕುರಿತು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮಾಹಿತಿ ನೀಡಿದ್ದು, ದೇಶದ 32 ಜಿಲ್ಲೆಗಳನ್ನು ಕೊರೊನಾ ಹಿಟ್ ಲಿಸ್ಟ್ ಗಳಲ್ಲಿ ಸೇರಿಸಲಾಗಿದ್ದು, ಅವುಗಳಲ್ಲಿಕರ್ನಾಟಕದ ಬೆಂಗಳೂರು ನಗರ ಹಾಗೂ ಬೀದರ್ ಜಿಲ್ಲೆಗಳು ಕೂಡ ಇವೆ ಎಂದರು.
ದೇಶದ 6 ರಾಜ್ಯಗಳಲ್ಲಿ ಶೇ.86ರಷ್ಟು ಕೊರೊನಾ ಸೋಂಕಿನಿಂದ ಸಾವು ಸಂಭವಿಸಿದೆ ಎಂದಿರುವ ಕೇಂದ್ರ ಆರೋಗ್ಯ ಸಚಿವರು, ಭಾರತದಲ್ಲಿ ಇನ್ನೂ ಸೋಂಕು ಸಮುದಾಯಕ್ಕೆ ಹರಡಿಲ್ಲ ಎಂದಿದ್ದಾರೆ. ದೇಶದಲ್ಲಿ ಮಹಾಮಾರಿ ಕೊರೊನಾ 7 ಲಕ್ಷ ಗಡಿ ತಲುಪಿದರೂ ಸಮುದಾಯಕ್ಕೆ ಹರಡಿಲ್ಲ ಎಂಬ ಸಚಿವರ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ