ಒಂದು ದಿನದ ಮಗುವಿನಿಂದ ತಾಯಿಯನ್ನು ದೂರ ಮಾಡಿದ ಕ್ರೂರಿ ಕೊರೊನಾ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹುಟ್ಟಿದ ಒಂದು ದಿನದ ಮಗುವನ್ನು ಕೊರೊನಾ ಸೋಂಕು ತಾಯಿಯಿಂದ ದೂರ ಮಾಡಿರುವ ಘಟನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಡೆದಿದೆ.

ನವಜಾತ ಶಿಶುವಿನ ಅಪ್ಪ ಹಾಗೂ ಅಮ್ಮ ಇಬ್ಬರಲ್ಲೂ ಕೊರೊನಾ ಸೋಂಕು ದೃಢಪಟ್ಟಿದ್ದು, ಮಗುವಿನಲ್ಲಿ ಮಾತ್ರ ಕೊರೊನಾ ನೆಗೆಟಿವ್ ಬಂದಿದೆ. ಸದ್ಯ ಮಗುವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದ್ದು, ತಾಯಿಯಿಂದ ದೂರವಿರಿಸಲಾಗಿದೆ.

Related Articles
Home add -Advt

ಪತಿಗೆ ಕೊರೊನಾ ಇದ್ದಿದ್ದರಿಂದ ಪತ್ನಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿ ಮಗುವಿಗೆ ಜನ್ಮ ನೀಡಿದ ತಕ್ಷಣ ತಾಯಿಯನ್ನು ವಿಕ್ಟೋರಿಯಾ ಹಾಗೂ ಮಗುವನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆಘಾತಕಾರಿ ವಿಚಾರವೆಂದರೆ ಪತಿ ಹಾಗೂ ಪತ್ನಿ ಇಬ್ಬರೂ ತಮಗೆ ಕೊರೊನಾ ಇರುವುದನ್ನು ಮುಚ್ಚಿಟ್ಟಿದ್ದಾರೆ. ಪತ್ನಿ ತುಂಬು ಗರ್ಭಿಣಿಯಾಗಿದ್ದರು. ಆಸ್ಪತ್ರೆಯವರಿಗೆ ಮಾಹಿತಿ ಇಲ್ಲದೆ ಪತ್ನಿಗೆ ಸರ್ಜರಿ ಮಾಡಿ ಡೆಲಿವರಿ ಮಾಡಿಸಿದ್ದಾರೆ. ಈ ವೇಳೆ ಅನುಮಾನಗೊಂಡು ತಪಾಸಣೆ ನಡೆಸಿದಾಗ ಕೊರೊನಾ ಇರುವುದು ಗೊತ್ತಾಗಿದೆ. ಪರಿಣಾಮ ಇದೀಗ ಬೆಂಗಳೂರಿನ ಕುರುಬರಹಳ್ಳಿಯಲ್ಲಿರುವ ಖಾಸಗಿ ಆಸ್ಪತ್ರೆಯನ್ನೇ ಸೀಜ್ ಮಾಡಲಾಗಿದೆ.

ಇನ್ನು ಆಸ್ಪತ್ರೆ ಸುತ್ತಮುತ್ತ ಔಷಧಿ ಸಿಂಪಡಣೆ ಮಾಡುವ ಮೂಲಕ ಆಸ್ಪತ್ರೆ ಪಕ್ಕದ ಕಟ್ಟಡ ವಾಸಿಗಳ ಮೇಲೂ ನಿಗಾ ವಹಿಸಲಾಗಿದೆ.

Related Articles

Back to top button