ಭಟ್ಕಳದಲ್ಲಿ ಆಸ್ಪತ್ರೆಯಿಂದ ಎಸ್ಕೇಪ್ ಆದ ಸೋಂಕಿತ

ಪ್ರಗತಿವಾಹಿನಿ ಸುದ್ದಿ; ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಎಂದು ದಾಖಲಾಗಿದ್ದ ಯುವಕ ರಾತ್ರೋರಾತ್ರಿ ಆಸ್ಪತ್ರೆಯಿಂದ ಎಸ್ಕೇಪ್ ಅಗಿರುವ ಘಟನೆ ನಡೆದಿದೆ.

ಗಂಟಲು ನೋವು, ಜ್ವರ ಹಿನ್ನಲೆಯಲ್ಲಿ ಮಾರ್ಚ್ 27ರಂದು ಯುವಕ ಆಸ್ಪತ್ರೆಗೆ ದಾಖಲಾಗಿದ್ದ. ಈತನಲ್ಲಿ ಕೊರೊನಾ ಸೋಂಕು ಇರಬಹುದೆಂದು ಶಂಕಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ವೇಳೆ ಪರಾರಿಯಾಗಿದ್ದಾನೆ. ನಿನ್ನೆ ಬೆಳಗ್ಗಿನಿಂದ ಆಸ್ಪತ್ರೆಯ ಸುತ್ತಮುತ್ತ ಯುವತಿಯೋರ್ವಳು ಮಾಸ್ಕ್ ಧರಿಸಿಕೊಂಡು ಓಡಾಡಿಕೊಂಡಿದ್ದಳು. ಇದೇ ಯುವತಿ, ಯುವಕನಿಗೆ ಊಟ ನೀಡುವ ನೆಪದಲ್ಲಿ ವಾರ್ಡ್ ಪ್ರವೇಶಿಸಿ ಯುವಕನನ್ನು ಕರೆದುಕೊಂಡು ಹೋಗಿದ್ದಾಳೆ ಎನ್ನಲಾಗಿತ್ತು.

ಪರಾರಿಯಾಗಿದ್ದ ಯುವಕನನ್ನು ಪತ್ತೆ ಹಚ್ಚಿದ್ದ ಪೊಲೀಸರು ಆರೋಗ್ಯ ಇಲಾಖೆಯಿಂದ ಮನವೊಲಿಸಿ ಆಸ್ಪತ್ರೆಗೆ ಕರೆತಂದು ಮತ್ತೆ ದಾಖಲು ಮಾಡಿದ್ದಾರೆ. ಈತ ಕೊರೊನಾ ಸೋಂಕಿತರ ಅಥವಾ ವಿದೇಶದಿಂದ ಬಂದ ಯಾರ ಸಂಪರ್ಕಕ್ಕೂ ಹೋಗಿರಲಿಲ್ಲ. ಈತನಲ್ಲಿ ಜ್ವರ, ಗಂಟಲು ನೋವು ಇರುವುದರಿಂದ ವೈದ್ಯರು ಮುನ್ನೆಚ್ಚರಿಕಾ ಕ್ರಮವಾಗಿ ಹೋಂ ಕ್ವಾರಂಟೈನ್ ನಲ್ಲಿ ಇರಿಸಿದ್ದಾರೆ.

Home add -Advt

Related Articles

Back to top button