Latest

ಕೊರೊನಾದಿಂದ ಮುಕ್ತವಾಗಿದ್ದ ಚೀನಾದಲ್ಲಿ ಮತ್ತೆ ಹೆಚ್ಚಿದ ಸೋಂಕು

ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ವಿಶ್ವದಲ್ಲೇ ಮೊದಲಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಚೀನಾದ ವುಹಾನ್​ ನಗರದಲ್ಲಿ ಕೊರೋನಾ ವೈರಸ್ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ವುಹಾನ್ ನಲ್ಲಿ ಮೊದಲು ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಈಗ ಕೊರೋನಾ ಪ್ರಕರಣ ಕಡಿಮೆ ಆಯಿತು ಎನ್ನುವಾಗಲೇ ಬೀಜಿಂಗ್​ನಲ್ಲಿ ಮತ್ತೆ ಕೊರೋನಾ ವೈರಸ್​ ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ.

ಚೀನಾದಲ್ಲಿ ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಂದಿತ್ತು. ಆದರೆ ಈಗ ದಕ್ಷಿಣ ಬೀಜಿಂಗ್​ನಲ್ಲಿ ಒಂದೇ ದಿನ 57 ಕೇಸ್​ಗಳು ಪತ್ತೆ ಆಗಿವೆ. ಚೀನಾದಲ್ಲಿ ಏಪ್ರಿಲ್​ನಿಂದ ಇಲ್ಲಿವರೆಗೆ ಒಂದೇ ದಿನ ದಾಖಲಾದ ಅತಿ ಹೆಚ್ಚು ಪ್ರಕರಣ ಇದಾಗಿದೆ.

ಬೀಜಿಂಗ್​ನಲ್ಲಿರುವ ತರಕಾರಿ ಹಾಗೂ ಮಾಂಸದ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಕೊರೋನಾ ಕಾಣಿಸಿಕೊಂಡಿದೆ. ಇವನಿಂದಾಗಿ 37 ಜನರಿಗೆ ವೈರಸ್ ಹರಡಿದೆ ಎನ್ನಲಾಗಿದೆ. ಉಳಿದ ಪ್ರಕರಣಗಳು ವಿದೇಶದಿಂದ ಬಂದವರಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button