ಕೊರೊನಾ ಭೀತಿ ಹಿನ್ನಲೆ: ಕರೆನ್ಸಿ ನೋಟು ನಿಷೇಧಿಸಿದ ಗುಜರಾತ್ ಸರ್ಕಾರ

ಪ್ರಗತಿವಾಹಿನಿ ಸುದ್ದಿ; ಅಹ್ಮದಾಬಾದ್: ಕರೆನ್ಸಿ ನೋಟುಗಳಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿರುವುದರಿಂದ ಗುಜರಾತ್ ಸರ್ಕಾರ ನೋಟು ಬಳಕೆ ನಿಲ್ಲಿಸಿದ್ದು, ಮೇ 15ರಿಂದ ಸಂಪೂರ್ಣ ಡಿಜಿಟಲ್‌ ವ್ಯವಹಾರ ಜಾರಿಗೊಳಿಸಲು ಮುಂದಾಗಿದೆ.

ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಅಹಮದಾಬಾದ್‌ನಲ್ಲಿ ಎಲ್ಲ ಖರೀದಿ ವ್ಯವಹಾರಗಳಿಗೂ ಡಿಜಿಟಲ್‌ ಪೇಮೆಂಟ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಗುಜರಾತ್‌ನ ಹೆಚ್ಚುವರಿ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಗುಪ್ತಾ ಆದೇಶ ಹೊರಡಿಸಿದ್ದಾರೆ. ಮೇ 15ರಿಂದ ಡಿಜಿಟಲ್‌ ಮೂಲಕವೇ ಹಣ ಪಾವತಿಸಬೇಕು. ನಗದು ವ್ಯವಹಾರ ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಅಹಮದಾಬಾದ್ನಲ್ಲಿ 5 ಸಾವಿರಕ್ಕೂ ಹೆಚ್ಚು ಕೊರೋನಾ ವೈರಸ್ ಪ್ರಕರಣ ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಯಮವನ್ನು ಸರ್ಕಾರ ಬಿಗಿಗೊಳಿಸಿದೆ. ದಿನಸಿ, ಹಾಲು ಹಾಗೂ ಔಷಧ ಅಂಗಡಿ ಬಿಟ್ಟು ಮತ್ತಾವುದೇ ಅಂಗಡಿಗಳನ್ನು ತೆರೆಯದಂತೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button