Latest

ಕೊರೊನಾ ಮಹಾಮಾರಿಗೆ ಬಲಿಯಾದ ಆರೋಗ್ಯಾಧಿಕಾರಿ ಕುಟುಂಬ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕೊರೊನಾ ವಾರಿಯರ್ಸ್ ಗಳ ಕುಟುಂಬಕ್ಕೆ ಸೂಕ್ತವಾದ ಆರೋಗ್ಯ ರಕ್ಷಣೆ ಸಿಗುತ್ತಿಲ್ಲ. ಆರೋಗ್ಯ ಅಧಿಕಾರಿಯೊಬ್ಬರ ಕುಟುಂಬದ ಮೂವರು ಕೊರೊನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.

ಬೊಮ್ಮನಹಳ್ಳಿ ಆರೋಗ್ಯಧಿಕಾರಿಯ ಒಂದೇ ಕುಟುಂಬದ ಮೂವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಆದರೆ, ಸೂಕ್ತ ಚಿಕಿತ್ಸೆ ಸಿಗದೆ ಮೂವರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬೊಮ್ಮನಹಳ್ಳಿ ಆರೋಗ್ಯಧಿಕಾರಿಯ 70 ವರ್ಷದ ತಂದೆ, 65 ವರ್ಷದ ತಾಯಿ ಹಾಗೂ 49 ವರ್ಷದ ಮಾವ ಮೂವರು ಇದೀಗ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ಆರೋಗ್ಯಧಿಕಾರಿಯ ಮಾವ ಸಹ ವೈದ್ಯರಾಗಿದ್ದರು. ಆದಾಗ್ಯೂ ಕೂಡ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ. ಚಿಕಿತ್ಸೆ ಸಿಗದೇ ಮೂವರು ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button