ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ಐಸ್ ಕ್ರೀಂ ನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಐಸ್ ಕ್ರೀಂ ತಿಂದ ಸಾವಿರಾರು ಜನರು ಆತಂಕಕ್ಕೀಡಾಗಿರುವ ಘಟನೆ ಚೀನಾದ ಟಿಯಾಂಜಿನ್ ಪ್ರದೇಶದಲ್ಲಿ ನಡೆದಿದೆ.
ಡಕಿಯಾವಾಡು ಫುಡ್ ಕಂಪನಿ ತಯಾರಿಸಿದ್ದ ಐಸ್ ಕ್ರೀಂ ಬಾಕ್ಸ್ ಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸ್ಥಳೀಯಾಡಳಿತ ಅಧಿಕಾರಿಗಳು ಐಸ್ ಕ್ರೀಂ ಕಂಪನಿಗೆ ಬೀಗ ಹಾಕಿದ್ದು, ಕಂಪನಿಯ ಎಲ್ಲಾ ಉದ್ಯೋಗಿಗಳನ್ನು ಕ್ವಾರಂಟೈನ್ ಮಾಡಿದ್ದಾರೆ.
ಕಂಪನಿಯ 1600 ಉದ್ಯೋಗಿಗಳ ಪೈಕಿ 600 ಸಿಬ್ಬಂದಿಗಳ ಕೊವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಆದರೆ ಐಸ್ ಕ್ರೀಂ ನಿಂದಾಗಿಯೇ ಕೊರೊನಾ ಸೋಂಕು ಬಂದಿದೆಯೇ ಎಂಬ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಆದರೆ 29 ಸಾವಿರ ಐಸ್ ಕ್ರೀಂ ಬಾಕ್ಸ್ ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ