Latest

ದೇಶದಲ್ಲಿ ಇಂದು ಒಂದೇ ದಿನ 6,767 ಜನರಲ್ಲಿ ಕೊರೊನಾ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲಾಕ್ ಡೌನ್ ಸಡಿಲಿಕೆಯಾದ ಬೆನ್ನಲ್ಲೇ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 6,767 ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 1,38,181ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂದು ಒಂದೇ ದಿನ ಮಾರಕ ಕೊರೋನಾಗೆ 147 ಮಂದಿ ಬಲಿಯಾಗಿದ್ದಾರೆ. ಇದರ ಪರಿಣಾಮ ಕೋವಿಡ್​​-19 ಸೋಂಕಿಗೆ ಬಲಿಯಾದವರ ಸಂಖ್ಯೆ 3867ಕ್ಕೆ ಏರಿಕೆಯಾಗಿದೆ.

ಜಗತ್ತಿನಾದ್ಯಂತ ಇದುವರೆಗೂ ಒಟ್ಟು 54, 01,222 ಜನರಿಗೆ ಕೋವಿಡ್-19 ಸೋಂಕು ಬಂದಿದೆ. ಜಾನ್ಸ್‌ ಹಾಪ್‌ಕಿನ್ಸ್ ಎಂಬ ಕೊರೋನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ, ಸೋಂಕಿಗೆ ಜಾಗತಿಕವಾಗಿ 3,43,799 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಅಮೆರಿಕಾವೊಂದರಲ್ಲೇ 98,683 ಜನ ಅಸುನೀಗಿದ್ದಾರೆ.

ಅಮೆರಿಕಾದಲ್ಲಿ ಅತೀಹೆಚ್ಚು ಜನರಲ್ಲಿ ಅದರೆ 16, 66,828 ಜನರಿಗೆ ಕೋವಿಡ್‌-19 ಪಾಸಿಟಿವ್​​ ಪತ್ತೆಯಾಗಿದೆ. ಸದ್ಯ 11, 21,231 ಮಂದಿಗೆ ಮಾತ್ರ ಸಕ್ರಿಯವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಬ್ರೆಜಿಲ್‌ ನಲ್ಲಿ ಮಾರಕ ಕೊರೋನಾದಿಂದ ಬಳಲುತ್ತಿರುವವರ ಸಂಖ್ಯೆ ​3,47,398ಕ್ಕೆ ತಲುಪಿದೆ. ಇದರಲ್ಲಿ 22,013 ಜನರು ಸಾವನ್ನಪ್ಪಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button