Latest

24 ಗಂಟೆಯಲ್ಲಿ ಬರೋಬ್ಬರಿ 6,977 ಜನರಲ್ಲಿ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 6,977 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ. ಈ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ 1,38,845 ಕ್ಕೆ ಏರಿಕೆಯಾಗಿದೆ.

ವಿಶ್ವದಲ್ಲಿ 54 ಲಕ್ಷ ಜನರಲ್ಲಿ ಕೊರೋನಾ ವೈರಸ್​ ಇದೆ. ಈ ಪೈಕಿ 3.46 ಲಕ್ಷ ಜನರು ಕೊರೋನಾ ವೈರಸ್​ಗೆ ಮೃತಪಟ್ಟಿದ್ದಾರೆ. ಈ ಪೈಕಿ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 1.38 ಲಕ್ಷ ಇದೆ. ಕಳೆದ 24 ಗಂಟೆಯಲ್ಲಿ 154 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 4,021ಕ್ಕೆ ಏರಿಕೆಯಾಗಿದೆ.

Related Articles

ಕಳೆದ 24 ಗಂಟೆಯಲ್ಲಿ 3,280 ಜನರು ವೈರಸ್​ನಿಂದ ಚೇತರಿಕೆ ಕಂಡಿದ್ದಾರೆ. ಭಾರತದಲ್ಲಿ ಈವರೆಗೆ 57 ಸಾವಿರ ಜನರು ವೈರಸ್​ನಿಂದ ಮುಕ್ತಿ ಕಂಡಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button