ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದಿನ ದಿನಕ್ಕೂ ರಣಕೇಕೆ ಹಾಕುತ್ತಿದೆ. ಪ್ರತಿ ದಿನ ಸುಮಾರು 20 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಮೂಲಕ ಕಳೆದ ಮೂರು ದಿನದಲ್ಲಿ ಭಾರತ ಅತಿ ಹೆಚ್ಚು ಕೊರೊನಾ ಪೀಡಿತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಸಮೀಪಿಸುತ್ತಿದೆ.
ದೇಶದಲ್ಲಿ ಸೋಂಕು ಹಬ್ಬುತ್ತಿರುವ ವೇಗ ಹೆಚ್ಚಾಗಿದ್ದು ಪ್ರತಿದಿನ 20 ಸಾವಿರ ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗೆ ಹೆಚ್ಚಾಗುತ್ತಿರುವ ಸೋಂಕು ಭಾರತವನ್ನು ಇನ್ನು ಮೂರೇ ದಿನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂನರೇ ಸ್ಥಾನಕ್ಕೆ ತಂದು ನಿಲ್ಲಿಸುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ.
ಜಾಗತಿಕವಾಗಿ ಕೊರೊನಾ ಪೀಡಿತ ದೇಶಗಳಲ್ಲಿ ಸದ್ಯ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಈವರೆಗೂ ದೇಶದಲ್ಲಿ 6 ಲಕ್ಷದ 27 ಸಾವಿರ ಜನರಲ್ಲಿ ಸೋಂಕು ದೃಢವಾಗಿದೆ. 6 ಲಕ್ಷದ 61 ಸಾವಿರ ಕೇಸ್ ಹೊಂದಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ. ರಷ್ಯಾ ಮತ್ತು ಭಾರತ ಸೋಂಕು ಪ್ರಮಾಣ ಏರಿಕೆ ಗಮನಿಸಿದರೆ ಭಾರತ ಇನ್ನು ಮೂರೇ ದಿನದಲ್ಲಿ ವಿಶ್ವದ ಅತಿ ಹೆಚ್ಚು ಕೊರೊನಾ ಪೀಡಿತ ದೇಶಗಳ ಪಟ್ಟಿಯ ಮೂರನೇ ಸ್ಥಾನಕ್ಕೆ ಏರೋದು ಖಚಿತವಾಗುತ್ತಿದೆ.
ಪ್ರಸ್ತುತ ಅಮೆರಿಕದಲ್ಲಿ 27,82, 539 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಮೊದಲ ಸ್ಥಾನದಲ್ಲಿದೆ. ಪ್ರತಿದಿನಕ್ಕೆ 45-50 ಸಾವಿರ ಕೇಸ್‍ಗಳು ಪತ್ತೆಯಾಗುತ್ತಿದೆ.
ಬ್ರೇಜಿಲ್ – 14,56, 969 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಇಲ್ಲೂ ಕೂಡ ಪ್ರತಿ ದಿನ 50 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ತಿದೆ.
ರಷ್ಯಾದಲ್ಲಿ 6,61,165 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಪ್ರತಿನಿತ್ಯ 6-7 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ.
ಇನ್ನು ಭಾರತದಲ್ಲಿ 6,04,461 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ನಿತ್ಯ 19-20 ಸಾವಿರ ಜನರಲ್ಲಿ ದೃಢಪಡುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ