ಇಟಲಿಯಲ್ಲಿ 24 ಗಂಟೆಯಲ್ಲಿ ಕೊರೊನಾಗೆ 964 ಜನ ಬಲಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮಾಹಾಮಾರಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಿಶ್ವಾದ್ಯಂತ ಆವರಿಸಿದೆ. ಇಟಲಿಯಲ್ಲಿ ಕೊರೋನಾಗೆ 24 ಗಂಟೆಯಲ್ಲಿ 964 ಜನರು ಬಲಿಯಾಗಿದ್ದಾರೆ.

ಈ ಮೂಲಕ ಕೊರೋನಾಗೆ ಬಲಿಯಾದವರ ಬೇರೆಲ್ಲ ದೇಶಗಳ ಅಂಕಿ-ಅಂಶಗಳನ್ನು ಇಟಲಿ ಹಿಂದಿಕ್ಕಿದೆ. ಇಲ್ಲಿವರೆಗೆ ಇಟಲಿಯಲ್ಲಿ 86,500 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈಗಾಗಲೇ 9,134 ಜನರು ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು ಮಾ. 21ರಂದು ಇಟಲಿಯಲ್ಲಿ 793 ಜನರು ಸಾವನ್ನಪ್ಪಿದ್ದರು. ಆದರೆ, ನಿನ್ನೆ ಒಂದೇ ದಿನ ಸುಮಾರು 1,000 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಕೊರೋನಾ ವೈರಸ್​ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಿದೆ.

ಇಟಲಿಯಲ್ಲಿ ಸೋಮವಾರ- 602, ಮಂಗಳವಾರ- 743, ಬುಧವಾರ- 683, ಗುರುವಾರ- 712, ಶುಕ್ರವಾರ- 969 ಜನರು ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button