Latest

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಇಂದು 14 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ಇಂದು 14 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 862 ಸೋಂಕಿತರ ಪೈಕಿ 426 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯಾದ್ಯಂತ 31 ರೋಗಿಗಳು ಕೊರೋನಾದಿಂದ ಸಾವನ್ನಪ್ಪಿದ್ದಾರೆ.

Home add -Advt

ದಾವಣಗೆರೆಯಲ್ಲಿ 3, ಹಾವೇರಿಯ ಶಿಗ್ಗಾವಿಯಲ್ಲಿ 1, ಕಲಬುರ್ಗಿಯಲ್ಲಿ 1, ಬಾಗಲಕೋಟೆಯಲ್ಲಿ 2, ಬೀದರ್​ನಲ್ಲಿ 2, ವಿಜಯಪುರದಲ್ಲಿ 1, ಹಾಸನದಲ್ಲಿ 1, ಮಂಡ್ಯದಲ್ಲಿ 1, ಬೆಂಗಳೂರಿನಲ್ಲಿ 1 ಮತ್ತು ಕರ್ನಾಟಕದಲ್ಲಿ ವಾಸವಾಗಿರುವ ಆಂಧ್ರಪ್ರದೇಶದ ಓರ್ವ ಮಹಿಳೆಗೆ ಕೊರೋನಾ ಸೋಂಕು ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ಅತಿಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 178, ಬೆಳಗಾವಿಯಲ್ಲಿ 113, ಮೈಸೂರಿನಲ್ಲಿ 88, ಕಲಬುರ್ಗಿಯಲ್ಲಿ 72, ದಾವಣಗೆರೆಯಲ್ಲಿ 71 ಕೊರೋನಾ ಕೇಸುಗಳು ಪತ್ತೆಯಾಗಿದೆ.

Related Articles

Back to top button