ಒಂದುವರೆ ವರ್ಷದ ಮಗುವಿಗೂ ಬಂತು ಕರೋನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ದಿನ ದಿನಕ್ಕೂ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ಒಂದುವರೆ ವರ್ಷದ ಮಗು ಸೇರಿದಂತೆ 36 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 5, ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ 8, ಚಿಕ್ಕೋಡಿಯಲ್ಲಿ 1, ಬೆಳಗಾವಿಯ ರಾಯಬಾಗದಲ್ಲಿ 7, ಬೆಳಗಾವಿಯಲ್ಲಿ 1, ಮೈಸೂರಿನಲ್ಲಿ 3, ಗದಗದಲ್ಲಿ 1, ಕಲಬುರ್ಗಿಯಲ್ಲಿ 1, ವಿಜಯಪುರದಲ್ಲಿ 7, ಕಲಬುರ್ಗಿಯಲ್ಲಿ 2 ಜನರಿಗೆ ಕೊರೋನಾ ವೈರಸ್​ ಇರುವುದು ಖಚಿತವಾಗಿದೆ. ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಹೊಸದಾಗಿ 34 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

Home add -Advt

ಬೆಳಗಾವಿಯ ರಾಯಬಾಗದಲ್ಲಿ ಕೆಲವು ತಿಂಗಳಿನಿಂದ ವಾಸವಾಗಿದ್ದ ಮಹಾರಾಷ್ಟ್ರದ ಮೀರಜ್, ವಿಜಯಪುರದ ನಿವಾಸಿ, ಗೋವಾದ ನಿವಾಸಿಯಲ್ಲಿ ಕೂಡ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 17 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಇದರಲ್ಲಿ ಸೇರಿದ್ದಾರೆ.

ಇನ್ನು ವಿಜಯಪುರದಲ್ಲಿ ಒಂದೂವರೆ ವರ್ಷದ ಮಗುವಿಗೆ ಅಪ್ಪ-ಅಮ್ಮನಿಂದಲೇ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೈಸೂರಿನ ಫಾರ್ಮಾ ಕಂಪನಿಯ ಮೂವರು ನೌಕರರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

Related Articles

Back to top button