ಕೊರೊನಾ ಹಾಟ್ ಸ್ಪಾಟ್ ಜಿಲ್ಲೆಗಳು ಸೀಲ್?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದರೂ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ರಾಜ್ಯದಲ್ಲೂ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೊರೊನಾ ತಡೆಗಾಗಿ ಸರ್ಕಾರ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

ಕೊರೊನಾ ಸೋಂಕಿತರ ಪ್ರದೇಶಗಳನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡುವುದು. ಈ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ, ಜನರಿಗೆ ಮನೆಯಿಂದ ಹೊರ ಬರದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸುವುದು. ಆ ಪ್ರದೇಶವನ್ನು ಸೀಲ್ ಮಾಡುವ ಮೂಲಕ ಕೊರೊನಾ ಚೈನ್ ಕಟ್ ಮಾಡುವುದು.

ರಾಜ್ಯದಲ್ಲಿ ಕೊರೊನಾ ಹಾಟ್‍ಸ್ಪಾಟ್‍ಗಳಾದ 18 ಜಿಲ್ಲೆಗಳಲ್ಲಿ ಸೀಲ್ ಮಾದರಿಯ ನಿಯಮ ಜಾರಿ ಆಗುವ ಸಾಧ್ಯತೆ ಇದೆ. ಈ ಮೂಲಕ ಈವರೆಗೂ ಸರ್ಕಾರದ ನಿಯಮ ಪಾಲಿಸದ ಜನರಿಗೆ ಕಠಿಣ ಕ್ರಮಗಳ ಮೂಲಕ ಚಾಟಿ ಏಟು ನೀಡುವ ಸಾಧ್ಯತೆಗಳಿವೆ.

ಬೆಂಗಳೂರು ನಗರ- 63 – ಕೊರೊನಾ ಸೋಂಕಿತರ ಸಂಖ್ಯೆ, ಮೈಸೂರು-35, ದಕ್ಷಿಣ ಕನ್ನಡ-13, ಚಿಕ್ಕಬಳ್ಳಾಪುರ-08, ಕಲಬುರಗಿ-09, ಬೆಂಗಳೂರು ಗ್ರಾಮಾಂತರ-03, ಬೆಳಗಾವಿ-07, ಬಳ್ಳಾರಿ-06, ಬೀದರ್-10, ಉತ್ತರ ಕನ್ನಡ-9, ಕೊಡಗು – 01, ಮಂಡ್ಯ-04, ಬಾಗಲಕೋಟೆ-05, ಉಡುಪಿ-03, ದಾವಣಗೆರೆ-03, ತುಮಕೂರು-02, ಗದಗ-01 ಮತ್ತು ಧಾರವಾಡ – 1 ಈ ಜಿಲ್ಲೆಗಳಲ್ಲಿ ಸೀಲ್ ಮಾದರಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button