Latest

ಹೊಸ ನಿಯಮದ ಪ್ರಕಾರ ಮಾಸ್ಕ ಧರಿಸದಿದ್ದರೆ ದಂಡ ಎಷ್ಟು ಗೊತ್ತೇ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಸ್ಕ್ ಧರಿಸದವರಿಗೆ 1000 ರೂ ದಂಡ ವಿಧಿಸುತ್ತಿದ್ದ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ದಂಡದ ಮೊತ್ತವನ್ನು ಇಳಿಕೆ ಮಾಡಲಾಗಿದೆ.

ಹೊಸ ನಿಯಮದ ಪ್ರಕಾರ ನಗರ ಪ್ರದೇಶದಲ್ಲಿ ವಿಧಿಸಲಾಗಿದ್ದ 1000 ರೂಪಾಯಿ ದಂಡವನ್ನು 250ಕ್ಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿ ದಂಡವನ್ನು 100ಕ್ಕೆ ಇಳಿಸಲಾಗಿದೆ. ತಕ್ಷಣದಿಂದಲೇ ಜಾರಿಯಾಗುವಂತೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ದಂಡ ಇಳಿಕೆ ಪ್ರಮಾಣ ಸಿಸ್ಟಂ ಗಳಲ್ಲಿ ಅಪ್ ಡೇಟ್ ಆಗಿಲ್ಲ. ಮಧ್ಯಾಹ್ನದ ಒಳಗೆ ಸಿಸ್ಟಂ ಗಳಲ್ಲಿ ಅಪ್ ಡೇಟ್ ಮಾಡುವ ಸಾಧ್ಯತೆ ಇದ್ದು, ಆ ಬಳಿಕವೇ ಹೊಸ ನಿಯಮದ ಅನ್ವಯ ದಂಡ ವಿಧಿಸಲಾಗುತ್ತದೆ ಎನ್ನಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button