ಕೊರೊನಾ ಸೋಂಕಿಗೆ ರಾಮಬಾಣ ಈ ಸಮುದ್ರ ಪಾಚಿ ಚಿಕ್ಕಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿತರನ್ನು ಗುಣಪಡಿಸುವ ನಿಟ್ಟಿನಲ್ಲಿ ರಾಮಬಾಣವಾಗಿ ಸಿಕ್ಕಿದೆ ಸಮುದ್ರ ಪಾಚಿಯ ಚಿಕ್ಕಿ. ಹೌದು. ಸಮುದ್ರದ ಪಾಚಿಯಿಂದ ಮಾಡುವ ಕಡಲೆ ಬೀಜದ ಚಿಕ್ಕಿ ಕೊರೊನಾ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದೆ.

ಸಮುದ್ರ ಪಾಚಿ ಬಳಸಿಕೊಂಡು ತಯಾರಿಸಿದ ಪಾಚಿ ಕಡಲೆಮಿಠಾಯಿ ಇದಾಗಿದೆ. ದೇಹದ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಿದೆ. ಮೈಸೂರಿನ ಸಿಎಫ್‍ಟಿಆರ್ ನಿಂದ ಈ ಚಿಕ್ಕಿ ಸಂಶೋಧನೆ ಮಾಡಲಾಗಿದ್ದು, ಈಗಾಗಲೇ ಮೈಸೂರು, ಬೆಂಗಳೂರು, ಮಂಡ್ಯದಲ್ಲಿನ ಕೊರೊನಾ ಪಾಸಿಟಿವ್ ರೋಗಿಗಳಿಗೆ ನೀಡಲಾಗಿದೆ.

ಸ್ಟೆರೊಲಿನ್ ಚಿಕ್ಕಿಯಲ್ಲಿ ವಿಟಮಿನ್ ಸಿ ಕಂಟೆಂಟ್ ಹೆಚ್ಚಿದೆ. ಇದು ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ. ಇದನ್ನು ಸಂಜೆಯ ಸ್ನಾಕ್ ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೀಡಲಾಗುತ್ತದೆ. ಕೇವಲ ರೋಗ ನಿರೋಧಕ ಶಕ್ತಿ ಮಾತ್ರವಲ್ಲ ಇಂದು ಉಸಿರಾಟದ ತೊಂದರೆಯನ್ನು ಕೂಡ ನಿವಾರಿಸುವ ವಿಶೇಷ ಶಕ್ತಿಯೂ ಇದ್ರಲ್ಲಿದೆಯಂತೆ.

ಗರ್ಭಿಣಿ, ಮಕ್ಕಳಿಗೆ ಹಾಗೂ ವಯಸ್ಸಾದ ಕೋವಿಡ್ ರೋಗಿಗಳಿಗೆ ಇದನ್ನು ಹೆಚ್ಚು ನೀಡಲಾಗುತ್ತದೆ. ಇದು ಅನಿಮೀಯಾದಂತಹ ತೊಂದರೆಯನ್ನು ನಿವಾರಿಸುತ್ತದೆ. ಅಧಿಕ ರಕ್ತದ ಒತ್ತಡಕ್ಕೂ ಈ ಚಿಕ್ಕಿ ರಾಮಬಾಣವಾಗಿದೆ. ಅಲ್ಲದೆ ವೈರಸನ್ನು ದೇಹದಲ್ಲಿ ವ್ಯಾಪಕವಾಗಿ ಬೆಳೆಯದಂತೆ ತಡೆಗಟ್ಟುವ ಶಕ್ತಿ ಇದಕ್ಕಿದೆ.

ದೇಹದಲ್ಲಿ ಶಕ್ತಿ ತುಂಬುವ ಇದು ಅರಶಿನದ ಗುಣವನ್ನು ಕೂಡ ಹೊಂದಿದೆ. ಕ್ಯಾನ್ಸರ್ ರೋಗಿಗಳ ರೋಗನಿರೋಧಕಕ್ಕೂ ಇದನ್ನು ಬಳಕೆ ಮಾಡಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button