ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಆತಂಕಕಾರಿಯಾಗಿ ಹರಡುತ್ತಿದೆ. ಈ ನಡುವೆ ಸೋಂಕಿನ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿದೆ ಎನ್ನಲಾಗಿದೆ. ಕಾರಣ ರಾಜ್ಯದಲ್ಲಿ ಕೊರೊನಾ ಸೋಂಕಿನ ರೋಗ ಲಕ್ಷಣಗಳೇ ಇಲ್ಲದ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ.
ನೆಗಡಿ, ಕೆಮ್ಮು, ಜ್ವರ ಇವು ಕೊರೋನಾ ವೈರಸ್ ಸೋಂಕಿನ ಪ್ರಮುಖ ರೋಗ ಲಕ್ಷಣಗಳಾಗಿವೆ. ಸೋಂಕು ತಗುಲಿದ 2ರಿಂದ 15 ದಿನಗಳಲ್ಲಿ ಈ ರೋಗ ಲಕ್ಷಣಗಳು ವ್ಯಕ್ತವಾಗುವ ನಿರೀಕ್ಷೆ ಇರುತ್ತದೆ. ಕೆಲವರಲ್ಲಿ ಇದು 30 ದಿನಗಳ ಮೇಲಾದರೂ ಕಾಣಿಸುವುದೇ ಇಲ್ಲ. ಇದು ವೈದ್ಯಕೀಯ ಮತ್ತು ಆಡಳಿತ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಇದೂವರೆಗೂ 794 ಕೊರೋನಾ ಸೋಂಕಿತರು ಪತ್ತೆಯಾಗಿದ್ಧಾರೆ. ಅವರಲ್ಲಿ ರೋಗ ಲಕ್ಷಣಗಳಿರುವ ವ್ಯಕ್ತಿಗಳು 198 ಮಾತ್ರ. ಇನ್ನುಳಿದ ಬರೋಬ್ಬರಿ 596 ಮಂದಿಗೆ ಯಾವುದೇ ರೋಗಲಕ್ಷಣಗಳೇ ಇಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆಯ ವರದಿಯಲ್ಲಿ ಬೆಳಕಿಗೆ ಬಂದಿದೆ. ಅಂದರೆ, ಶೇ. 75ರಷ್ಟು ಸೋಂಕಿತರು ಯಾವ ರೋಗ ಲಕ್ಷಣಗಳಿಲ್ಲದೆ ಸಹಜವಾಗಿಯೇ ಇದ್ದಾರೆ. ರೋಗ ಲಕ್ಷಣಗಳೇ ಇಲ್ಲದ ವ್ಯಕ್ತಿಗಳನ್ನು ಪತ್ತೆಹಚ್ಚುವುದೇ ಇದೀಗ ಸವಾಲಿನ ವಿಷಯವಾಗಿದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ