Latest

ರೂಪಾಂತರಿ ವೈರಸ್ ಜತೆಗೆ ಕೋವಿಡ್ ಸೋಂಕಿತರ ಸಂಖ್ಯೆಯೂ ದಿಢೀರ್ ಏರಿಕೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರೂಪಾಂತರಿ ವೈರಸ್ ಆತಂಕದ ನಡುವೆಯೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 13,154 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಒಂದೇ ದಿನದಲ್ಲಿ 268 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 480860 ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 961 ಜನರಲ್ಲಿ ರೂಪಾಂತರಿ ಕೊರೊನಾ ವೈರಸ್ ಒಮಿಕ್ರಾನ್ ಪತ್ತೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 263 ಜನರಲ್ಲಿ ಸೋಂಕು ದೃಢಪಟ್ಟಿದೆ.

ಕರ್ನಾಟಕದಲ್ಲಿ 34 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ.ಒಮಿಕ್ರಾನ್ ಸೋಂಕಿತರ ಸಂಖ್ಯೆ ಯಾವ ರಾಜ್ಯದಲ್ಲಿ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ದೆಹಲಿ – 263
ಮಹಾರಾಷ್ಟ್ರ -252
ಕೇರಳ – 57
ಗುಜರಾತ್ -97
ರಾಜಸ್ಥಾನ – 69
ತೆಲಂಗಾಣ -62
ತಮಿಳುನಾಡು -45
ಕರ್ನಾಟಕ -34
ಮಧ್ಯಪ್ರದೇಶ -9
ಆಂಧ್ರಪ್ರದೇಶ -16
ಪಶ್ಚಿಮ ಬಂಗಾಳ -11
ಹರ್ಯಾಣ -4
ಒಡಿಶಾ -9
ಚಂಡಿಗಢ -3
ಜಮ್ಮು-ಕಾಶ್ಮೀರ -3
ಉತ್ತರ ಪ್ರದೇಶ -2
ಹಿಮಾಚಲ ಪ್ರದೇಶ -1
ಗೋವಾ – 1
ಲಡಾಕ್ -1
ಉತ್ತರಾಖಂಡ -4
ಮಣಿಪುರ -1
ಪಂಜಾಬ್ -1 ಕೇಸ್ ಪತ್ತೆಯಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button