ಪ್ರಗತಿವಾಹಿನಿ ಸುದ್ದಿ; ಉಡುಪಿ: ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಅವರ ವರದಿಯಲ್ಲಿ ಕೊರೊನಾ ನೆಗೆಟೀವ್ ಬಂದಿದೆ. ಈ ಹಿನ್ನಲೆಯಲ್ಲಿ ಶ್ರೀಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾ ಸೋಂಕಿನಿಂದ ಹೊರಬರುವುದು ಹೇಗೆ ಎಂಬ ಬಗ್ಗೆ ಮಾತನಾಡಿರುವ ಪುತ್ತಿಗೆ ಶ್ರೀಗಳು, ಕೊರೋನಾ ವೈರಸ್ಗೆ ಯಾವುದೇ ಔಷಧ, ಲಸಿಕೆ ತಯಾರಾದರೂ ಅದು ಶಾಶ್ವತ ಪರಿಹಾರಲ್ಲ. ದೇಹದ ಪ್ರತಿರೋಧ ಶಕ್ತಿಯೇ ಕೊರೋನಾ ವಿರುದ್ಧ ಹೋರಾಟ ನಡೆಸಲು ಉತ್ತಮ ಔಷಧ ಎಂದಿದ್ದಾರೆ.
ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದನ್ನು ರೂಡಿಸಿಕೊಳ್ಳಬೇಕು. ಇದರಿಂದ ನಮ್ಮ ದೇಹದಲ್ಲಿನ ಯಾವುದೇ ರೋಗವನ್ನೂ ದೂರ ಮಾಡಬಹುದು.ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದರಿಂದ ದೇಹದ ಪ್ರತಿರೋಧಕ ಶಕ್ತಿ ಜಾಗೃತವಾಗುತ್ತದೆ. ನನಗೆ ಯಾವಾಗಲೂ ಬೆಳಗ್ಗೆ 4 ಗಂಟೆಗೆ ಕೆಮ್ಮು ಶುರುವಾಗುತ್ತಿತ್ತು. ರಾತ್ರಿ ಬೇಗ ಮಲಗಿ ಎಂದು ವೈದ್ಯರು ಹೇಳುತ್ತಿದ್ದರು. ಆದರೆ, ಬಿಡುವಿಲ್ಲದ ದಿನಚರಿಯಲ್ಲಿ ಅದು ಸಾಧ್ಯವಾಗುತ್ತಿರಲಿಲ್ಲ. ಆಸ್ಪತ್ರೆಯಲ್ಲಿ ಇದ್ದಾಗ ಬೇಗ ಮಲಗುತ್ತಿದ್ದೆ. ಇದರಿಂದ ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಸಕಾಲಕ್ಕೆ ಆಹಾರ, ನಿದ್ರೆ ಮಾಡಿದರೆ ಯಾವ ರೋಗವೂ ಬರಲ್ಲ. ಸನಾತನ ಧರ್ಮ, ಭಗವದ್ಗೀತೆಯಲ್ಲೂ ಇದನ್ನ ಹೇಳಲಾಗಿದೆ. ಸೂರ್ಯಾಸ್ತದ ಮೊದಲು ಆಹಾರ, ಸೂರ್ಯಾಸ್ತದ ಎರಡು ಗಂಟೆ ನಂತರ ನಿದ್ರೆ ಮಾಡಬೇಕು. ಇದರಿಂದ ದೇಹದ ಪ್ರತಿರೋಧಕ ಶಕ್ತಿ ಜಾಗೃತವಾಗುತ್ತದೆ. ಇದನ್ನ ನನ್ನ ಅನುಭವದಲ್ಲಿ ಕಂಡುಕೊಂಡಿದ್ದೇನೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ