ಪ್ರಗತಿವಾಹಿನಿ ಸುದ್ದಿ; ದಾಂಡೇಲಿ: ಮೊಮ್ಮಗನಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಕ್ವಾರಟೈನ್ ಗೆ ಒಳಗಾಗಿದ್ದ ಅಜ್ಜಿ ತನಗೂ ಸೋಂಕು ಹರಡಿರುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ನಡೆದಿದೆ.
ಮಹರಾಷ್ಟ್ರದಿಂದ ಬಂದಿದ್ದ ಮೃತ ವೃದ್ಧೆಯ ಮೊಮ್ಮಗನಿಗೆ(ರೋಗಿ-1313) ಕೊವಿಡ್-19 ಪಾಸಿಟೀವ್ ಬಂದಿತ್ತು. ಸೋಂಕಿತ ವ್ಯಕ್ತಿ ತಮ್ಮ ಇಬ್ಬರು ಅಜ್ಜಿಯರು ಹಾಗೂ ಸಹೋದರನ ಜೊತೆ ವಾಸವಾಗಿದ್ದರು. ಈ ಹಿನ್ನೆಲೆಯಲ್ಲಿ ವ್ಯಕ್ತಿ ಸಂಪರ್ಕದಲ್ಲಿದ್ದ ಇಬ್ಬರು ಅಜ್ಜಿಯರು ಹಾಗೂ ಅವರ ಸಹೋದರನನ್ನು ದಾಂಡೇಲಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಮೊಮ್ಮಗನಿಗೆ ಸೋಂಕು ಬಂದಿರುವುದರಿಂದ ತನಗೂ ಸೋಂಕು ಬಂದಿದೆ ಎಂದು ಭಾವಿಸಿ ವೃದ್ಧೆ ಖಿನ್ನತೆಗೊಳಗಾಗಿದ್ದರು. ಇದೇ ಕಾರಣಕ್ಕೆ ವೃದ್ಧೆ ಇಂದು ಐಸೋಲೇಟೆಡ್ ವಾರ್ಡಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ