Latest

ಕೊರೊನಾ ವೈರಸ್ ಕಣ್ಣೀರಿಂದಲೂ ಹರಡುತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಡೀ ವಿಶ್ವವನ್ನೇ ತತ್ತರಗೊಳ್ಳುವಂತೆ ಮಾಡಿರುವ ಕೊರೊನಾ ಸೋಂಕು ಇದೀಗ ಕಣ್ಣೀರಿನಿಂದಲೂ ಹರಡುತ್ತೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಬಿಎಂಸಿಆರ್​​ಐ) ಮಹತ್ವದ ಸಂಶೋಧನೆ ಬಹಿರಂಗಗೊಳಿಸಿದೆ.

ಸುಮಾರು 45 ಸೋಂಕಿತರ ಕಣ್ಣೀರನ್ನು ಪರೀಕ್ಷಿಸಿದ ತಜ್ಞರ ತಂಡ ಕಣ್ಣೀರಿನಿಂದ ಕೊವಿಡ್ ಹರಡುತ್ತದೆ ಎಂದು ಹೇಳಿದೆ. ಸೋಂಕಿತರು ಕೆಮ್ಮಿದಾಗ ಅಥವಾ ಸೀನುವಾಗ ಸೋಂಕು ಕಣ್ಣಿನ ಮೂಲಕ ತಗುಲುವ ಅಪಾಯವಿರುತ್ತದೆ. ವೈರಸ್ ಇರುವ ಕೈಗಳಿಂದ ಕಣ್ಣುಗಳನ್ನು ಉಜ್ಜಿದಾಗಲೂ ಸೋಂಕು ಬರಬಹುದು ಎನ್ನಲಾಗಿತ್ತು. ಆದರೀಗ, ಸೋಂಕಿತ ವ್ಯಕ್ತಿಯ ಕಣ್ಣೀರಿನಿಂದಲೂ ವೈರಸ್ ಹರಡಲಿದೆ ಎಂದು ಬಿಎಂಸಿಆರ್​​ಐ ಸ್ಪಷ್ಟಪಡಿಸಿದೆ.

ಇದುವರಗೆ ಕೇವಲ ಎಂಜಲು ಮತ್ತು ಮೂಗಿನ ದ್ರವದಿಂದ ಕೊರೋನಾ ಸೋಂಕು ಹರಡುವುದು ತಿಳಿದಿತ್ತು. ಇದೇ ಮೊದಲ ಬಾರಿಗೆ ಕಣ್ಣೀರಿನಿಂದಲೂ ಕೋವಿಡ್ ಹರಡುವುದು ದೃಢಪಟ್ಟಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button