
ಪ್ರಗತಿವಾಹಿನಿ ಸುದ್ದಿ; ಹುಮ್ನಾಬಾದ್: ಚುನಾವಣೆ ಕರ್ತವ್ಯಕ್ಕೆ ಹಾಜರಾಗಿದ್ದ ಹಲವು ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗುತ್ತಿದ್ದು, ಇದೀಗ ಮತ್ತೊಂದು ಶಿಕ್ಷಕ ದಂಪತಿ ಮಹಾಮಾರಿಗೆ ಮೃತಪಟ್ಟಿರುವ ಘಟನೆ ಹುಮ್ನಾಬಾದ್ ನ ದುಬಲಗುಂಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಸುರೇಶ್ ನೀಲಂ (50) ಎಂಬ ಶಿಕ್ಷಕನನ್ನು ಬೀದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ 20 ದಿನಗಳ ಹಿಂದಷ್ಟೇ ಅವರ ಪತ್ನಿ ಮೀನಾಕ್ಷಿ ನೀಲಂ ಕೊರೊನಾಗೆ ಬಲಿಯಾಗಿದ್ದರು.
ಸುರೇಶ್ ನೀಲಂ ಭಾಲ್ಕಿ ತಾಲೂಕಿನ ನಾವದಗಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರೆ, ಪತ್ನಿ ದುಬಲಗುಂಡಿ ಗ್ರಾಮದಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುರೇಶ್ ಗ್ರಾಮದ ಮತದಾರರ ಪಟ್ಟಿಯ ಹೆಚ್ಚುವರಿಕಾರ್ಯವನ್ನೂ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನಾಯಕತ್ವ ಬದಲಾವಣೆ ಮಾತು; ಆಪ್ತ ಸಚಿವರ ಬಳಿ ಸಿಎಂ ಬೇಸರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ