Latest

ಹೋಂ ಕ್ವಾರಂಟೈನ್ ಗೆ ಹೊಸ ಗೈಡ್ ಲೈನ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೋಂ ಕ್ವಾರಂಟೈನ್​ನಲ್ಲಿರುವವರಿಗೆ ಕೇಂದ್ರ ಆರೋಗ್ಯ ಇಲಾಖೆ ವತಿಯಿಂದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಕ್ವಾರಂಟೈನ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಮೇ 10ರ ಮಾರ್ಗಸೂಚಿಯನ್ನು ಪರಿಷ್ಕರಿಸಿದ ಕೇಂದ್ರ ಸರ್ಕಾರ, ಸೌಮ್ಯ ಮತ್ತು ಪೂರ್ವ-ರೋಗಲಕ್ಷಣ ಇರುವವರಿಗೆ ಹೊಸ ನಿಯಮಗಳನ್ನು ನೀಡಿದೆ. ಅವರಿಗೆ ಹೋಂ ಐಸೋಲೇಷನ್​ಗೆ ಮನೆಯಲ್ಲಿ ಅಗತ್ಯ ಸೌಲಭ್ಯಗಳಿರಬೇಕು. ಕುಟುಂಬದ ಸಂಪರ್ಕಗಳನ್ನು ನಿರ್ಬಂಧಿಸಬೇಕು. ಪ್ರತ್ಯೇಕ ಶೌಚಾಲಯ ಇರಬೇಕು. ವಯಸ್ಕ ಆರೈಕೆದಾರರಿರಬೇಕು. ವಯಸ್ಸಾದವರು ಸೋಂಕಿತರ ಆರೈಕೆ ಮಾಡುವಂತಿಲ್ಲ. ದಿನದ 24 ಗಂಟೆಯೂ ಆರೈಕೆದಾರರು ಲಭ್ಯವಿರಬೇಕು. ಆರೈಕೆದಾರರು ಮತ್ತು ಆಸ್ಪತ್ರೆ ನಡುವೆ ಒಪ್ಪಂದ ಆಗಬೇಕು ಎಂದು ತಿಳಿಸಲಾಗಿದೆ.

ರೋಗಿಯ ಆರೋಗ್ಯ ಮೇಲ್ವಿಚಾರಣೆ‌ ಬಗ್ಗೆ ಆರೈಕೆದಾರರು ಒಪ್ಪಿಕೊಳ್ಳಬೇಕು. ಕಣ್ಗಾವಲು ತಂಡ ನಿಯಮಿತವಾಗಿ ಜಿಲ್ಲಾ ಕಣ್ಗಾವಲು ಅಧಿಕಾರಿಗೆ ಮಾಹಿತಿ ತಿಳಿಸಬೇಕು. ವೈದ್ಯಕೀಯ ಮತ್ತು ವಸತಿ ಸೌಕರ್ಯಗಳ ಮೌಲ್ಯಮಾಪನದ ಆಧಾರದ ಮೇಲೆ ವೈದ್ಯರು ಹೋಂ ಇಸೋಲೇಷನ್ ನಿರ್ಧರಿಸಬೇಕು. ಹೆಚ್ಚುವರಿಯಾಗಿ, ರೋಗಿಯು ಸ್ವಯಂ-ಪ್ರತ್ಯೇಕತೆಯ ಕುರಿತಾದ ಜವಾಬ್ದಾರಿಯನ್ನು ಭರ್ತಿ ಮಾಡಬೇಕು.

ಮನೆ ಪ್ರತ್ಯೇಕತೆಯ ಬಗ್ಗೆ ನಿಯಮಿತವಾಗಿ ವೈದ್ಯರ ತಂಡ ಮೇಲ್ವಿಚಾರಣೆ ಮಾಡಬೇಕು. ಅವರ ಡಿಸ್ಚಾರ್ಜ್ ಬಗ್ಗೆಯೂ ಮಾರ್ಗಸೂಚಿ ನಿಯಮಗಳನ್ನು ಅನುಸರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button