Latest

ಒಂದೇ ದಿನ 3,157 ಜನ ಕೋವಿಡ್ ಗೆ ಬಲಿ

ಪ್ರಗತಿವಾಹಿನಿ ಸುದ್ದಿ; ನ್ಯೂಯಾರ್ಕ್: ಕೊರೊನಾ ಸೋಂಕಿಗೆ ಒಂದೇ ದಿನ 3,157 ಜನ ಬಲಿಯಾಗಿರುವ ಘಟನೆ ಯು ಎಸ್ ನಲ್ಲಿ ಬೆಳಕಿಗೆ ಬಂದಿದೆ.

ಚಳಿಗಾಲದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿ ಹರಡುತ್ತಿದ್ದು, ವರದಿ ಪ್ರಕಾರ ಯುಸ್ ನಲ್ಲಿ ಬುಧವಾರ ಒಂದೇ ದಿನ 1,00,200 ಜನರಿಗೆ ಸೋಂಕು ತಗುಲಿದೆ. ಈ ವರೆಗೆ 2,73,836 ಜನರು ಸಾವನ್ನಪ್ಪಿದ್ದಾರೆ. 13.9 ದಶಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ.

ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button