Kannada NewsKarnataka NewsLatest

*ಮದುವೆಯಾಗುವುದಾಗಿ ನಂಬಿಸಿ ಇಂಜಿನಿಯರ್ ನಿಂದ ಶಿಕ್ಷಕಿಗೆ ಮೋಸ: ಎಫ್ಐಆರ್ ದಾಖಲು*

ಪ್ರಗತಿವಾಹಿನಿ ಸುದ್ದಿ: ಮದುವೆಯಾಗುವುದಾಗಿ ನಂಬಿಸಿ ಇಂಜಿನಿಯರ್ ಒಬ್ಬ ಶಿಕ್ಷಕಿಗೆ ಮೋಸ ಮಾಡಿದ್ದು, ರಾಯಚೂರು ಮಹಿಳಾ ಠಾಣೆಯಲ್ಲಿ ಸಂತ್ರಸ್ತ ಶಿಕ್ಷಕಿ ಲವ್-ಸೆಕ್ಸ್-ದೋಖಾ ಕೇಸ್ ದಾಖಲಿಸಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗ ಮೂಲದ ಇಂಜಿನಿಯರ್ ಮಲ್ಲಿಕಾರ್ಜುನ್ ವಿರುದ್ಧ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಎಫ್ ಐ ಆರ್ ದಾಖಲಾಗಿದೆ. ಇಂಜಿನಿಯರ್ ಮಂಜುನಾಥ್ ಹಾಗೂ ಶಿಕ್ಷಕಿ ಕಾಲೇಜು ದಿನಗಳಿಂದಲೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಪ್ರೀತಿ-ಪ್ರೇಮ ಎಂದು 7-8 ವರ್ಷಗಳ ಕಾಲ ಈ ಜೋಡಿ ಓಡಾಡಿದೆ. ಮಂತ್ರಾಲಯ, ಆಲಮಟ್ಟಿ ಡ್ಯಾಂ ಸೇರಿದಂತೆ ಹಲವೆಡೆ ಸುತ್ತಾಡಿದ್ದಾರೆ..

ಅಲ್ಲದೇ ಮಲ್ಲಿಕಾರ್ಜುನ್ ಯುವತಿಯೊಂದಿಗೆ ಹಲವುಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕವನ್ನೂ ಬೆಳೆಸಿದ್ದನಂತೆ. ಮದುವೆಯಾಗುವುದಾಗಿ ಹೇಳಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆದರೆ ಈಗ ಜಾತಿ ನೆಪ ಹೇಳಿ ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಇಂಜಿನಿಯರ್ ನ ಮೋಸದಾಟಕ್ಕೆ ನೊಂದ ಸಂತ್ರಸ್ತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಲ್ಲಿಕಾರ್ಜುನ್ ಹಾಗೂ ತಾನು ಓಡಾಡಿದಾಗಿನ ಫೋಟೋ, ವಿಡಿಯೋ, ಆಡಿಯೋ ಸಂಭಾಷಣೆ, ಸಂದೇಶಗಳ ಸಮೇತವಾಗಿ ಶಿಕ್ಷಕಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಶಿಕ್ಷಕಿ ದೂರು ಆಧರಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ರಾಯಚೂರು ಎಸ್ ಪಿ ತಿಳಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button