Karnataka NewsLatest

ರಾಜ್ಯದಲ್ಲಿ 3648 ಜನರಿಗೆ ಇಂದು ಕೊರೋನಾ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು ಒಟ್ಟೂ 3648 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, 72 ಜನರು ಸಾವಿಗೀಡಾಗಿದ್ದಾರೆ.

ಬೆಂಗಳೂರಿನಲ್ಲಿ 1452 ಜನರಿಗೆ, ಬಳ್ಳಾರಿಯಲ್ಲಿ 234, ಬೆಂಗಳೂರು ಗ್ರಾಮಾಂತರ 208, ಧಾರವಾಡ 200, ವಿಜಯಪುರ 160, ಮೈಸೂರು 149, ಕಲಬುರಗಿ 124, ಉಡುಪಿ 98, ದಕ್ಷಿಣ ಕನ್ನಡ 89, ಉತ್ತರ ಕನ್ನಡ 78, ದಾವಣಗೆರೆ 73, ಹಾಸನ 67, ಕೊಪ್ಪಳ 62, ಬೆಳಗಾವಿ, ಚಿಕ್ಕಬಳ್ಳಾಪುರ 60, ರಾಮನಗರ 56, ತುಮಕೂರು 55, ಬಾಗಲಕೋಟೆ 54, ಚಾಮರಾಜನಗರ 49, ಯಾದಗಿರಿ, ಚಿಕ್ಕಮಗಳೂರು 43, ಮಂಡ್ಯ, ಕೋಲಾರ 41, ಹಾವೇರಿ 36, ಗದಗ 31, ಚಿತ್ರದುರ್ಗ 29, ಬೀದರ್ 26, ಶಿವಮೊಗ್ಗ 19, ಕೊಡಗು 8, ರಾಯಚೂರು 3 ಜನರಿಗೆ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 67,420ಕ್ಕೇರಿದೆ. ಇಂದು ಬೆಂಗಳೂರುನಲ್ಲಿ 31, ಧಾರವಾಡದಲ್ಲಿ 6, ಮೈಸೂರಿನಲ್ಲಿ 5 ಜನರು ಸಾವಿಗೀಡಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ 7 ಜನರು ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಒಟ್ಟೂ ಸಾವಿಗೀಡಾದವರ ಸಂಖ್ಯೆ 1403ಕ್ಕೇರಿದೆ.

ಬೆಳಗಾವಿಯ ವಿವರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ –

ಇಂದು ಬೆಳಗಾವಿ ಜಿಲ್ಲೆಯಲ್ಲಿ 60 ಜನರಿಗೆ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button