ಸಚಿವ ಸುಧಾಕರ ತಂದೆಗಷ್ಟೇ ಅಲ್ಲ, ಪತ್ನಿ, ಮಗಳಿಗೂ ಕೊರೋನಾ ಸೋಂಕು

ಪ್ರಗತಿವಾಹಿನಿ ಸುದ್ದಿ, ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ ಅವರ  82ವರುಷದ ತಂದೆ, ಹಾಗೂ ಮನೆಗೆಲಸಗಾರನಿಗೆ ಸೋಂಕು ದೃಢಪಟ್ಟ ಬೆನ್ನಲೇ ಮಂಗಳವಾರ ಸಚಿವರ ಪತ್ನಿ ಹಾಗೂ ಮಗಳಿಗೂ ಸೋಂಕು ದೃಢಪಟ್ಟಿದೆ.

ಸೋಮವಾರ ತಮ್ಮ ತಂದೆ ಹಾಗು ಮನೆಕೆಲಸಗಾರನಿಗೆ  ಯಾರ ಸಂಪರ್ಕವಿಲ್ಲದೆ ಸೋಂಕು  ಪತ್ತೆಯಾಗಿರುವುದಾಗಿ ಟ್ವಿಟರ್​ನಲ್ಲಿ ತಿಳಿಸಿದ್ದ  ಸಚಿವರು ಕುಟುಂಬದ ಇತರ ಸದಸ್ಯರ ಸೋಂಕು ಪರೀಕ್ಷೆಯ ವರದಿಗಾಗಿ ಕಾಯುತ್ತಿರುವುದಾಗಿ ಪೋಸ್ಟ್ ಮಾಡಿದ್ದರು. ಮಂಗಳವಾರ ಲಭ್ಯವಾದ ವರದಿಯಲ್ಲಿ  ಪತ್ನಿ,  ಮಗಳಿಗೆ ಸೋಂಕು ದೃಢಪಟ್ಟಿದೆ.

ಸಮಾಧಾನದ ಸಂಗತಿಯೆಂದರೆ ಸಚಿವರಿಗೂ ಅವರ ಇಬ್ಬರು ಗಂಡು ಮಕ್ಕಳಿಗೂ ಸೋಂಕು ತಗುಲಿಲ್ಲ, ಅವರ ವೈದ್ಯಕೀಯ ವರದಿ  ನೆಗೆಟಿವ್ ಬಂದಿದೆ.

ತಂದೆ, ಮನೆ ಕೆಲಸದವರಿಗೆ ಸೋಂಕಿನ ವಿಷಯ ಬಹಿರಂಗಪಡಿಸಿದ್ದ ಸಚಿವರು ಕುಟುಂಬದ ಉಳಿದ ಸದಸ್ಯರಿಗೆ ಸೋಂಕಿರಬಾರದೆಂದು ಪ್ರಾರ್ಥಿಸಿರೆಂದು ವಿನಂತಿಯನ್ನೂ ಮಾಡಿಕೊಂಡಿದ್ದರು, ಈಗ    ತಮ್ಮೆಲ್ಲರ ಒಳತಿಗಾಗಿ ಪ್ರಾರ್ಥಿಸಿದ ಮತ್ತು ಶುಭಕೋರಿದ ಎಲ್ಲರಿಗೂ ತಾವು  ಅಭಾರಿಯಾಗಿದ್ದೇನೆಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.

ಇನ್ನು ನಿನ್ನೆಯಷ್ಟೇ ಆರೋಗ್ಯ ಇಲಾಖೆ ಸಚಿವರ ಮನೆಯಲ್ಲಿದ್ದ ಕೆಲಸಗಾರರು ಸೇರಿದಂತೆ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು.  ವೈದ್ಯಕೀಯ ಶಿಕ್ಷಣ ಸಚಿವರ ಕುಟುಂಬಸ್ಥರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ರಾಜ್ಯದ ಜನತೆಯಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button