ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ಕರೋನಾ ವೈರಸ್ ಗೆ ಮೃತಪಟ್ಟವರ ಸಂಖ್ಯೆ 213ಕ್ಕೆ ಏರಿಕೆ ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ವಿಶ್ವಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ.
ಕರೋನಾ ವೈರಸ್ಗೆ ತುತ್ತಾದ 9,692 ಪ್ರಕರಣ ದಾಖಲಾಗಿದೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ವೈರಸ್ನ ಆತಂಕ ಹೆಚ್ಚಿರುವುದರಿಂದ ವಿಶ್ವಸಂಸ್ಥೆ ಪ್ರಪಂಚಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಈ ವೈರಸ್ ಹಬ್ಬುವುದನ್ನು ತಡೆಯುವಂತೆ ಮಾಡಲು ಪ್ರಯತ್ನಿಸಬೇಕು. ಎಲ್ಲರೂ ಒಟ್ಟಾದಾಗ ಮಾತ್ರ ಅದು ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇನ್ನು, ಚೀನಾದಿಂದ ಭಾರತಕ್ಕೆ ಆಗಮಿಸಿದ ಕೇರಳದ ವಿದ್ಯಾರ್ಥಿಯೊಬ್ಬನಿಗೆ ಈ ವೈರಸ್ ಇರುವುದು ಅಧಿಕೃತವಾಗಿದೆ. ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಈತ ಅಧ್ಯಯನ ನಡೆಸುತ್ತಿದ್ದ. ಜನವರಿ 25 ಚೀನಾಗೆ ಹೊಸ ವರ್ಷ. ಹೀಗಾಗಿ, ರಜೆಯ ಮಜ ಕಳೆಯಲು ವಿಶ್ವದ ನಾನಾ ಭಾಗಕ್ಕೆ ಚೀನಾ ದೇಶದವರು ಪ್ರವಾಸಕ್ಕೆ ತೆರಳುವವರಿದ್ದರು. ಹೀಗಾಗಿ ಪ್ರವಾಸ ಕೈಗೊಳ್ಳುವುದಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಹೀಗಾಗಿ ವಿಶ್ವಾದ್ಯಂತ ಈ ವೈರಸ್ ಅಷ್ಟಾಗಿ ಹಬ್ಬುತ್ತಿಲ್ಲ.
ಚೀನಾದ ಕೇಂದ್ರ ಪ್ರದೇಶ ಹುಬೈ ಪ್ರಾಂತ್ಯದಲ್ಲಿ ಮೃತಪಟ್ಟವರ ಸಂಖ್ಯೆ ಅಧಿಕವಾಗಿದೆ. ಹೀಗಾಗಿ ಈ ಭಾಗಕ್ಕೆ ತೆರಳದಂತೆ ನಿರ್ಬಂಧ ಹೇರಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆ ತಿಳಿಸಿದೆ.
2002-2003ರಲ್ಲಿ ಸಾರ್ಸ್ ಹೆಸರಿನ ಮಾರಣಾಂಯಿಕ ವೈರಸ್ ಕಾಣಿಸಿಕೊಂಡಿತ್ತು. 650 ಜನರು ಸಾರ್ಸ್ ಗೆ ಬಲಿಯಾಗಿದ್ದರು. ಇದೀಗ ಪತ್ತೆಯಾಗಿರುವ ಕರೋನಾ ವೈರಸ್ಗೂ ಸಾರ್ಸ್ಗೂ ಸಾಮ್ಯತೆ ಇರುವುದರಿಂದ ಆತಂಕ ಹೆಚ್ಚಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ