Belagavi NewsBelgaum NewsKannada NewsKarnataka News

*ಸಿಟಿ ರೌಂಡ್ಸ್ ಹಾಕಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸಿಟಿ ರೌಂಡ್ಸ್ ಹಾಕಿ ಅವಶ್ಯಕ ಮುಂಜಾಗ್ರತಾ ಕ್ರಮಗಳ ಪರಿಶೀಲನೆಯನ್ನು ನಡೆಸಿದರು. 

ಬಳಿಕ ಮಾಹಿತಿ ನೀಡಿದ ಅವರು, ಏಪ್ರೀಲ್, ಮೇ, ಜೂನ್ ತಿಂಗಳಲ್ಲೇ ನಗರದ ನಾಲೆಗಳ ಸ್ವಚ್ಛತೆಯನ್ನು ಪಾಲಿಕೆಯ ವತಿಯಿಂದ ಕೈಗೊಳ್ಳಲಾಗಿತ್ತು. ಅಲ್ಲದೇ ಚರಂಡಿಗಳ ಮತ್ತು ಒಳಚರಂಡಿಗಳ ಸ್ಚಚ್ಛತೆಗೆ ಗಮನಹರಿಸಲಾಗಿತ್ತು. ಮಹಾನಗರ ಪಾಲಿಕೆ, ಜಲಮಂಡಳಿ, ಸ್ಮಾರ್ಟ್ ಸಿಟಿ, ಅರಣ್ಯ ಇಲಾಖೆ, ಹೆಸ್ಕಾಂ ಸೇರಿದಂತೆ ಇನ್ನುಳಿದ ಅಧಿಕಾರಿಗಳ ವಿಶೇಷ ತಂಡ ನಗರದಲ್ಲಿ ಸಕ್ರಿಯವಾಗಿದ್ದು, ತುರ್ತುಪರಿಸ್ಥಿತಿಯಲ್ಲಿ ಶೀಘ್ರದಲ್ಲೇ ಸಹಾಯಕ್ಕೆ ಧಾವಿಸುತ್ತಿದೆ. ಅಲ್ಲದೇ ಅವಶ್ಯಕ ಸೌಕರ್ಯಗಳನ್ನು ಒದಗಿಸಲು ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಯಾವುದೇ ಸಹಾಯಬೇಕಿದ್ದರೂ ತಕ್ಷಣ ತಂಡವನ್ನು ಸಂಪರ್ಕಿಸಬಹುದಾಗಿದೆ ಎಂದರು. 

ಜನರ ಸ್ಥಳಾಂತರಕ್ಕೆ ಮನವಿ

ಬಳ್ಳಾರಿ ನಾಲಾ ನೀರು ಕೆಲ ಜನವಸತಿಗಳಲ್ಲಿ ನುಗ್ಗುವ ಪರಿಸ್ಥಿತಿಯಿದ್ದು. ಅಲ್ಲಿನ ಜನರ ಮನವೊಲಿಸಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಯತ್ನ ನಡೆದಿದೆ. ನಗರದಲ್ಲಿ ಮುಂಜಾಗೃತಾ ಕ್ರಮವಾಗಿ 10 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ನಗರದ ರಸ್ತೆಗಳಲ್ಲಿ ತೆರೆದುಕೊಂಡ ಗುಂಡಿಗಳನ್ನು ಮಳೆಗಾಲದ ಮೊದಲೂ ದುರಸ್ಥಿಗೊಳಿಸಲಾಗಿತ್ತು. ಈಗ ಮಳೆಯಿಂದಾಗಿ ಮತ್ತೇ ತೆರೆದುಕೊಂಡಿದ್ದು, ಅವುಗಳನ್ನು ಮುಚ್ಚುವ ಕಾರ್ಯ ನಡೆಯಲಿದೆ. 

ರಾಕಸಕೊಪ್ಪ ಜಲಾಶಯದಿಂದ ನೀರು ಬಿಡುಗಡೆ

ರಾಕಸಕೊಪ್ಪ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದ್ದು, ಕಟ್ಟೆಚ್ಚರ ವಹಿಸಲಾಗುತ್ತಿದೆ. ಹಿಂಡಲಗಾ ಪಂಪಹೌಸ್ ನೀರಿನಲ್ಲಿ ಮುಳುಗಡೆಯಾದರೇ ಕುಡಿಯುವ ನೀರನ್ನು ಪೂರೈಸಲು ಪರ್ಯಾಯ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತಿದ್ದು, ಅಧಿಕಾರಿಗಳ ತಂಡು ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು 24 ಗಂಟೆಗಳ ಕಾಲ ಸಕ್ರಿಯವಾಗಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ತಿಳಿಸಿದರು. 

https://pragativahini.com/all-preparations-for-extensive-rain-flood-management-in-

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button