ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪುರಪಿತೃವಾಗಿ ಚುನಾಯಿತರಾದರೂ ಪ್ರಮಾಣವಚನ ಸ್ವೀಕರಿಸಲಾಗದ ಅಸಮಾಧಾನದಿಂದ ಇಲ್ಲಿನ ಮಹಾನಗರ ಪಾಲಿಕೆ ಕಾರ್ಪೋರೇಟರ್ ಒಬ್ಬರು ಪಾಲಿಕೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ವಾರ್ಡ್ ನಂ. 7ರ ಕಾರ್ಪೋರೇಟರ್ ಶಂಕರ ಪಾಟೀಲ ಪ್ರತಿಭಟನೆ ನಡೆಸಿದವರು. “ಮತದಾರರು ನಗರಸೇವಕರಾಗಿ ಆರಿಸಿಕೊಟ್ರು.. ಸರಕಾರದವರು ಮಾತ್ರ ಅವರಿಗೆ ಅಧಿಕಾರ ನೀಡದೆ ಮನೆಯಲ್ಲಿ ಬಿಟ್ರು..#ಸರಕಾರದ ಆದೇಶಕ್ಕೆ ಬೆಲೆ ಇಲ್ಲವೇ?” ಎಂಬ ಫಲಕ ಹಿಡಿದು ಅವರು ಪ್ರತಿಭಟಿಸಿದರು.
“ನಾವು ಕಾರ್ಪೊರೇಟರ್‌ಗಳಾಗಿ ಚುನಾಯಿತರಾಗಿ 14 ತಿಂಗಳಾಗಿದ್ದರೂ, ನಾವು ಪ್ರಮಾಣ ವಚನ ಸ್ವೀಕರಿಸಿಲ್ಲ, ಆದ್ದರಿಂದ ನಾವು ಅಧಿಕೃತವಾಗಿ ಕಾರ್ಪೊರೇಟರ್‌ಗಳಲ್ಲ, ಮತ್ತು ನಮ್ಮ ಜನರಿಗೆ ಸೇವೆ ಸಲ್ಲಿಸಲು, ನಮ್ಮ ಆಯಾ ವಾರ್ಡ್‌ಗಳ ಅಭಿವೃದ್ಧಿ ಇತ್ಯಾದಿಗಳಿಗೆ ಯಾವುದೇ ಅಧಿಕಾರವಿಲ್ಲ,” ಎಂದು ಅವರು ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಶೀಘ್ರವೇ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ