Karnataka News

ಖ್ಯಾತ ನಟಿಯ ಶವ ಗೋಣಿಚೀಲದಲ್ಲಿ ಪತ್ತೆ

ಢಾಕಾ – ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಖ್ಯಾತ ಬಾಂಗ್ಲಾ ನಟಿ ರೈಮಾ ಇಸ್ಲಾಂ ಅವರ ಶವ ಢಾಕಾದ ಕೆರಾನಿಗಂಜ್‌ನ ಸೇತುವೆಯ ಕೆಳಗೆ ಪತ್ತೆಯಾಗಿದೆ. ಶವವನ್ನು ಗೋಣಿಚೀಲದಲ್ಲಿ ತುಂಬಿ ಎಸೆಯಲಾಗಿದೆ.

ಎರಡು ದಿನಗಳ ಹಿಂದೆ ನಟಿ ರೈಮಾ ಇಸ್ಲಾಂ ಅವರ ಪತಿ ಶಖಾವತ್ ಅಲಿ ತನ್ನ ಪತ್ನಿ ಕಾಣೆಯಾಗಿದ್ದಾರೆ ಎಂದು ಕಲಭಾಗನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಪೊಲೀಸರು ರೈಮಾರ ಹುಡುಕಾಟ ಆರಂಭಿಸಿದ್ದರು. ಈ ನಡುವೆ ಕೆರಾನಿಗಂಜ್ ಸೇತುವೆಯ ಕೆಳಗೆ ಗೋಣಿಚೀಲದಲ್ಲಿ ಶವ ತುಂಬಿ ಎಸೆದಿರುವುದನ್ನು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದಾಗ ನಟಿಯ ಮೃತದೇಹ ಕಂಡಿದೆ. ಮೃತದೇಹದ ತುಂಬಾ ಗಾಯದ ಗುರುತುಗಳಿದ್ದು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪತಿ ಶಕಾವತ್ ಅರೆಸ್ಟ್

ತನಿಖೆ ಕೈಗೊಂಡ ಪೊಲೀಸರು ನಟಿಯ ಪತಿ ಶಕಾವತ್ ಮತ್ತು ಆತನ್ ಕಾರ್ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ ನಟಿಯ ಪತಿ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಪತಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಸ್ಥಳೀಯ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಇಂಟರ್‌ನೆಟ್‌ನಲ್ಲಿ ಬಾಂಬ್ ಮಾಡುವುದು ಕಲಿತು ಸಿನಿಮೀಯ ಶೈಲಿಯಲ್ಲಿ ಸೇಡು ತೀರಿಸಿಕೊಂಡ

Home add -Advt

Related Articles

Back to top button