ಪ್ರಗತಿವಾಹಿನಿ ಸುದ್ದಿ, ನವದೆಹಲಿ: ದೇಶಾದ್ಯಂತ ನಡೆದಿರುವ ಲೋಕಸಭಾ ಚುನಾವಣೆ ಮತ ಎಣಿಕೆ ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, 10 ಗಂಟೆಯ ಹೊತ್ತಿಗೆ ಟ್ರೆಂಡ್ ಗೊತ್ತಾಗಲಿದೆ.
ದೇಶದ ಎಲ್ಲ 543 ಕ್ಷೇತ್ರಗಳ ಮತ ಎಣಿಕೆ ಏಕಕಾಲಕ್ಕೆ ಆರಂಭವಾಗಲಿದೆ. ಅಧಿಕೃತ ಫಲಿತಾಂಶ ಸಂಜೆಯ ಹೊತ್ತಿಗೆ ಗೊತ್ತಾಗಬಹುದಾದರೂ ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೇರಲಿದೆ ಎನ್ನುವುದು ಎಣಿಕೆ ಆರಂಭವಾದ 2 -3 ಗಂಟೆಯೊಳಗೆ ತಿಳಿಯಲಿದೆ.
ಈಗಾಗಲೆ ಹಲವು ಸಂಸ್ಥಗಳು ಎಕ್ಸಿಟ್ ಪೋಲ್ ನಡೆಸಿವೆ. ಕೇಂದ್ರದಲ್ಲಿ ಎನ್ ಡಿಎ ಸರಕಾರ ಮರುಸ್ಥಾಪನೆ ಖಚಿತ ಎನ್ನುವ ಫಲಿತಾಂಶವನ್ನು ಎಕ್ಸಿಟ್ ಪೋಲ್ ಗಳು ನೀಡಿವೆ. ಆದರೆ ಇಂಡಿಯಾ ಒಕ್ಕೂಟ ಎಕ್ಸಿಟ್ ಪೋಲ್ ನನ್ನು ನಂಬುವುದಿಲ್ಲ ಎಂದು ತಿಳಿಸಿದೆ.
ಇಡೀ ದೇಶದ ಜನರ ಗಮನ ಮತ ಎಣಿಕೆ ಮೇಲೆ ನೆಟ್ಟಿದೆ. ಪ್ರತಿ ಕ್ಷೇತ್ರದ ಫಲಿಂತಾಶ ಕುತೂಹಲ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ