Cancer Hospital 2
Beereshwara 33
LaxmiTai 5

ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾ ಅರೆಸ್ಟ್

Anvekar 3
GIT add 2024-1

ಪ್ರಗತಿವಾಹಿನಿ‌ ಸುದ್ದಿ: ರೇವ್ ಪಾರ್ಟಿ ನಡೆಸಿ, ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ ತೆಲಗು ನಟಿ ಹೇಮಾಳನ್ನು ಸಿಸಿಬಿ ಪೊಲೀಸರು ಲಾಕ್ ಮಾಡಿದ್ದಾರೆ. 

ರೇವ್ ಪಾರ್ಟಿ ಆರೋಪ ಕೇಳಿ ಬಂದಾಗಿನಿಂದಲೂ ನಾನು ಅಲ್ಲಿರಲಿಲ್ಲ ಎಂದು ವಾದಿಸುತ್ತಿದ್ದ ನಟಿ ಹೇಮಾಳನ್ನು ಸೋಮವಾರ ಆನೇಕಲ್ ನ ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.

Emergency Service

ನಗರದ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮೊದಲ ಬಾರಿ ಪೊಲೀಸರು ನೋಟಿಸ್ ನೀಡಿದ್ದರು. ಆದರೂ ನಟಿ ವಿಚಾರಣೆಗೆ ಹಾಜರಾಗಿರಲಿಲ್ಲ. ಎರಡನೇ ನೋಟಿಸ್ ನೀಡಿದ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗಿದ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.

ಇಂದು ಕೂಡ ನಟಿ ಹೇಮಾ ನಾನು ಯಾವುದೆ ತಪ್ಪು ಮಾಡಿಲ್ಲ ಎಂದು ಮುಂಚೆ ಹೇಳಿದ ಮಾತುಗಳನ್ನು ಮತ್ತೆ ಹೇಳಿದ್ದಾಳೆ.‌ ಪೊಲೀಸರ ವಾಹನ ಇಳಿಯುತ್ತಿದ್ದಂತೆ ನಾನು ಆ ಪಾರ್ಟಿಯಲ್ಲಿ ಇದ್ದೆ. ಕೇಕ್ ಕಟ್ ಮಾಡಿದ ತಕ್ಷಣ ಹೈದರಾಬಾದಿಗೆ ಹೋಗಿದ್ದೆ. ನಾನು ಪುರ್ತಿ ಪಾರ್ಟಿಯಲ್ಲಿ ಇದ್ದೆ ಎನ್ನುವುದು ಶುದ್ಧ ಸುಳ್ಳು. ನನ್ನ ಮೇಲೆ ಸುಖಾಸುಮ್ಮನೆ ಸುಳ್ಳು ಅಪವಾದ ಹೊರಿಸಲಾಗುತ್ತಿದೆ. ನಾನು ಯಾವುದೇ ಡ್ರಗ್ಸ್ ಕೂಡ ಸೇವನೆ ಮಾಡಿರಲಿಲ್ಲ. ಅಂದು ನನ್ನ ಬಳಿ ಯಾವುದೇ ಟೆಸ್ಟ್ ಕೂಡ ಪಡೆದಿರಲಿಲ್ಲ. ಇಂದು ಕರೆಸಿಕೊಂಡು ಟೆಸ್ಟ್ ಮಾಡಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ಹೇಳಿದರು.

Bottom Add3
Bottom Ad 2