Cancer Hospital 2
Beereshwara 36
LaxmiTai 5

ಅಂಗನವಾಡಿ ಆಹಾರ ಸಾಮಗ್ರಿಗಳ ಅಕ್ರಮ ಸಂಗ್ರಹ: ಕಾರ್ಯಕರ್ತೆ ಅಮಾನತು

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಸರಬರಾಜಾದ ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ಶೇಖರಣೆ ಮಾಡಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ, ಅಕ್ರಮವಾಗಿ ಆಹಾರ ಸಾಮಗ್ರಿ ಸಂಗ್ರಹಿಸಿಟ್ಟಿರುವುದು ದೃಡಪಟ್ಟಿದೆ. ಹಾಗಾಗಿ ಅಂಗನವಾಡಿ ಕಾರ್ಯಕರ್ತೆ ಸುರೇಖಾ ಜಯಪಾಲ ಹಟ್ಟಿಹೊಳ್ಳಿ ಇವರನ್ನು ಅಮಾನತುಗೊಳಿಸಲಾಗಿದೆ.‌

ಬೆಳಗಾವಿ ನಗರದ ಯೋಜನಾ ವ್ಯಾಪ್ತಿಯಲ್ಲಿ ಜೂನ್ 1 ರಂದು ಬಂದ ದೂರಿನ ಅನ್ವಯ ಮನೆ ನಂ -480, ಶೇರಿಗಲ್ಲಿ ವಿಳಾಸದಲ್ಲಿ ವಾಸವಿರುವ ಭೋವಿಗಲ್ಲಿ ಕೋಡ್ ಸಂಖ್ಯೆ 36 ಕೇಂದ್ರದ ಕಾರ್ಯಕರ್ತೆ ಸುರೇಖಾ ಜಯಪಾಲ ಹಟ್ಟಿಹೊಳ್ಳಿ ಇವರ ಮನೆಯ ಮೇಲೆ ಬೆಳಗಾವಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಲಯ ಮೇಲ್ವಿಚಾಕಿ ಹಾಗೂ ಕೆಲವು ಅಂಗನವಾಡಿ ಕಾರ್ಯಕರ್ತೆಯರ ಸಮ್ಮುಖದಲ್ಲಿ ಪರಿಶೀಲನೆ ಮಾಡಿದಾಗ ಪುಷ್ಠಿ 12 ಚೀಲ, ರವಾ 4 ಚೀಲ, ಮಿಲ್ಟ ಲಾಡು 2 ಚೀಲ ಹಾಗೂ ಬೆಲ್ಲ 2 ಚೀಲ, ಆಹಾರ ಪದಾರ್ಥಗಳು ಪೂರ್ವಾನುಮತಿ ಪಡೆಯದೆ ಅಕ್ರಮವಾಗಿ ಮನೆಯಲ್ಲಿ ಶೇಖರಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ ದಾಸ್ತಾನು ಪುಸ್ತಕದಲ್ಲಿ ಆಹಾರ ಪದಾರ್ಥಗಳ ವಿತರಣೆ ವಿವರಗಳನ್ನು ಕೂಡಾ ನಮೂದಿಸಿಲ್ಲ ಜೊತೆಗೆ ಫಲಾನುಭವಿಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡದೆ ಉಳಿಸಿಕೊಂಡಿದ್ದಾರೆ.‌ ಹಾಗಾಗಿ  ಅಂಗನವಾಡಿ ಕಾರ್ಯಕರ್ತೆಯನ್ನು ಅಮಾನತು ಮಾಡಲಾಗಿದೆ.‌

Emergency Service

ಸುರೇಖಾ ಜಯಪಾಲ ಹಟ್ಟಿಹೊಳ್ಳಿ ಇವರನ್ನು ಅಮನತು ಮಾಡಿರುವ ಕಾರಣ ತಕ್ಷಣದಿಂದ ಸದರಿ ಕೇಂದ್ರದ ಪ್ರಭಾರವನ್ನು ಬೆಳಗಾವಿ ನಗರ ಭೋವಿಗಲ್ಲಿ ಕೋಡ್ ನಂ: 35ರ ಕಾರ್ಯಕರ್ತೆಯಾದ ಗೀತಾ ಕಿಲ್ಲೇಕರ್ ರವರಿಗೆ ನೀಡಿ ಬೆಳಗಾವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ಆದೇಶಿಸಿದ್ದಾರೆ.‌

Bottom Add3
Bottom Ad 2