Kannada NewsKarnataka News

*ಆತ್ಮಹತ್ಯೆಗೆ ಶರಣಾದ ದಂಪತಿ*

ಪ್ರಗತಿವಾಹಿನಿ ಸುದ್ದಿ: ಮಗನ ಹೆಂಡತಿ ತವರು ಮನೆಗೆ ಹೋದ ಕಾರಣಕ್ಕೆ ತಂದೆ-ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Home add -Advt

ಚಂದ್ರಶೇಖರ್ (54) ಹಾಗೂ ಶಾರದಮ್ಮ(46)  ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮಗ ಪ್ರಶಾಂತನಿಗೆ ವರ್ಷದ ಹಿಂದೆಯಷ್ಟೇ ಮದುವೆ ಮಾಡಿದ್ದರು. ಪತ್ನಿಯೊಂದಿಗೆ ಸುಖವಾಗಿರಬೇಕಿದ್ದ ಮಗ ಕುಡಿತದ ಚಟಕ್ಕೆ ಬಲಿಯಾಗಿ ನಿತ್ಯವೂ ಕುಡಿದು ಮನೆಗೆ ಬರೋದು, ಕೆಲವೊಮ್ಮೆ ಮನೆಗೆ ಬಾರದೆ ಎಲ್ಲೋ ಮಲಗಿ ಬರುತ್ತಿದ್ದ. ಇದರಿಂದ ಬೇಸತ್ತ ಹೆಂಡತಿ ಮೂರು ತಿಂಗಳ ಹಿಂದೆಯಷ್ಟೇ ಗಂಡನ ಮನೆ ತೊರೆದು ತವರು ಮನೆ ಸೇರಿದ್ದಾಳೆ.

ಇದರಿಂದ ನೊಂದಿದ್ದ ದಂಪತಿ,  ಸುಖವಾಗಿರುತ್ತಾನೆಂದು ಮದುವೆ ಮಾಡಿಕೊಟ್ಟರು ಕುಡಿತದ ಚಟಕ್ಕೆ ಬಿದ್ದು ದಾಂಪತ್ಯ ಹಾಳುಮಾಡಿಕೊಂಡನಲ್ಲ ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಮಗನ ಭವಿಷ್ಯ ನೆನೆದು ನಿನ್ನೆ ಎರಡನೇ ಮಗನನ್ನು ಅಂಗಡಿಗೆ ಕಳಿಸಿ ಬಳಿಕ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಮೂಲತಃ ಹೊಸಕೋಟೆ ಮೂಲದವರಾದ ದಂಪತಿ ಹಲವು ವರ್ಷಗಳಿಂದ ಹಳೇ ಬೈಯಪ್ಪನಹಳ್ಳಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸ ಮಾಡಿಕೊಂಡಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button